29ರ ಪ್ರಿಯತಮೆಯಿಂದ ಮಗು ಪಡೆದು, 83ನೇ ವಯಸ್ಸಿನಲ್ಲಿ 4ನೇ ಮಗು ತಂದೆಯಾದ ನಟ

Public TV
1 Min Read
Hollywood 1

ಖ್ಯಾತ ಹಾಲಿವುಡ್ (Hollywood) ನಟ ಆಲ್ಫ್ರೆಡೋ ಜೇಮ್ಸ್ ಪೆಸಿನೊ (Al Pacino) 83ನೇ ವಯಸ್ಸಿನಲ್ಲಿ 29 ವರ್ಷದ ಪ್ರಿಯತಮೆಯಿಂದ ಮಗು ಪಡೆದಿದ್ದಾರೆ. ತನ್ನ ಪ್ರಿಯತಮೆ ನೂರ್ ಅಲ್ಫಾಹ್‌ಗೆ (Noor Alfallah) ಗಂಡು ಮಗು ಜನಿಸಿದ್ದು, 4ನೇ ಮಗುವಿನ ತಂದೆಯಾಗಿದ್ದಾರೆ. ಮಗುವಿಗೆ ರೋಮನ್ ಪೆಸಿನೋ ಎಂದು ಹೆಸರಿಟ್ಟಿದ್ದಾರೆ.

ಪೆಸಿನೋ ಅವರಿಗೆ ಇದು 4ನೇ ಮಗು. ಬೆವರ್ಲಿ ಡಿ ಏಂಜೆಲೊ ಎನ್ನುವ ಪ್ರಿಯತಮೆಯಿಂದ (Girlfriend) ಆಂಟೊನ್, ಒಲಿವಿಯಾ ಎಂಬ ಮಕ್ಕಳನ್ನ ಪಡೆದಿದ್ದಾರೆ. ಜಾನ್ ಟೆರಂಟ್ ಎನ್ನುವ ಗೆಳತಿಯಿಂದ ಜೂಲಿ ಮೇರಿ ಎನ್ನುವ ಮಗಳು ಪಡೆದಿದ್ದಾರೆ.

Hollywood 2

ಓಲ್ಡ್ ಈಸ್ ಗೋಲ್ಡ್ ಅಂತಾರೆ:
ಪೆಸಿನೋ, ಅಲ್ಫಲ್ಲಾಹ್ ಅವರು 2022ರಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದರು. ಅಂದಿನಿಂದಲೇ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಸಾಕಷ್ಟು ಬಾರಿ ಡಿನ್ನರ್ ಡೇಟ್ ಕೂಡ ಮಾಡಿದ್ದರು ಎನ್ನಲಾಗಿದೆ. ಈ ವಿಷಯ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ ಒಲ್ಡ್ ಈಸ್ ಗೋಲ್ಡ್ ಅಂತಾ ನೆಟ್ಟಿಗರು ಕಾಲೆಳೆದಿದ್ದಾರೆ. ಇದನ್ನೂ ಓದಿ: ಇಂದು ಅಭಿ-ಅವಿವಾ ಬೀಗರ ಔತಣ – ಬಾಡೂಟದ ಮೆನು ಏನು?

Hollywood 3

ಇನ್ನೂ 29ರ ಮಹಿಳೆ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಣ ಪಡೆದಿರುವ ಅಲ್ಫಲ್ಲಾಹ್ ಅವರು ಸದ್ಯ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಫಲ್ಲಾಹ್ ಅವರು 2017ರಲ್ಲಿ ಮಿಕ್ ಜಾಗರ್ ಎನ್ನುವವರ ಜೊತೆ ಡೇಟ್ ಮಾಡಲು ಆರಂಭಿಸಿದ್ದರು. ಆಗ ಮಿಕ್‌ಗೆ 74 ವರ್ಷ ಆಗಿದ್ದರೆ ಅಲ್ಫಲ್ಲಾಹ್ ಅವರಿಗೆ 22 ಆಗಿತ್ತು. ಆ ನಂತರ ಅವರೊಂದಿಗೆ ಬ್ರೇಕಪ್ ಆಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಗರಡಿಯಲ್ಲಿ ಸುಂದರ ಹುಡುಗಿಯರ ಜೊತೆ ಕಾಣಿಸಿಕೊಂಡ ಸೂರ್ಯ

20ನೇ ಶತಮಾನದಲ್ಲಿ ಬಹುಬೇಡಿಕೆಯ ನಟನಾಗಿದ್ದ ಪೆಸಿನೋ ನಟನೆಗೆ ಪ್ರೈಂಟೈಂ ಎಮಿ ಅವಾರ್ಡ್ಸ್, ಎಎಫ್‌ಐ ಜೀವಮಾನ ಸಾಧನಾ ಪ್ರಶಸ್ತಿ ಹಾಗೂ ಗೋಲ್ಡನ್ ಗ್ಲೋಬ್ ಸೆಸಿಲ್ ಬಿ. ಡಿಮಿಲ್ಲೆ ಪ್ರಶಸ್ತಿಗಳು ಸಂದಿವೆ.

Share This Article