ಹಾಲಿವುಡ್ ನ ಖ್ಯಾತ ಗಾಯಕ ಫಿಫ್ಟಿ ಸೆಂಟ್ (ಕರ್ಟಿಸ್ ಜೇಮ್ಸ್ ಜ್ಯಾಕ್ಷನ್) ವಿರುದ್ಧ, ಅವರ ಮಾಜಿ ಪ್ರೇಯಸಿಯೇ ಅತ್ಯಾಚಾರದ ಆರೋಪ ಮಾಡಿದ್ದಾರೆ. ಜನಪ್ರಿಯ ಮಾಡೆಲ್ ಆಗಿರುವ ಡ್ಯಾಫ್ನಿ ಜೋಯ್ ಹಾಗೂ ಫಿಫ್ಟಿ ಸೆಂಟ್ ಹಲವಾರು ವರ್ಷಗಳಿಂದ ಲಿವಿನ್ ರಿಲೇಷನ್ ಶಿಪ್ ನಲ್ಲಿದ್ದರು. ನಂತರ ಇವರು ದೂರವಾಗಿದ್ದಾರೆ. ದೂರವಾದ ನಂತರ ಅತ್ಯಾಚಾರದ ಆರೋಪ ಮಾಡಲಾಗಿದೆ.
Advertisement
ಕೇವಲ ಅತ್ಯಾಚಾರ ಆರೋಪ ಮಾತ್ರವಲ್ಲ, ಹಲ್ಲೆ ಮತ್ತು ನಿಂದನೆಯ ಆರೋಪವನ್ನೂ ಹೊರಸಿದ್ದಾರೆ. ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನೀನು ಸರಿ ಹೋಗಿ, ತಂದೆಯ ಜವಾಬ್ದಾರಿಯನ್ನು ಸಮರ್ಥವಾಗಿ ಪೂರೈಸುತ್ತೀಯಾ ಅಂದುಕೊಂಡಿದೆ. ಆ ಕಾಯುವಿಕೆ ವ್ಯರ್ಥವಾಗಿದೆ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಈ ಜೋಡಿಗೆ ಒಂದು ಮಗು ಕೂಡ ಇದೆ. ಈ ಮಗುವನ್ನು ನೋಡಲು ಅವರು ಬರುತ್ತಿಲ್ಲ ಎನ್ನುವುದು ಡ್ಯಾಫ್ನಿ ಆರೋಪ ಕೂಡ. ಅಂದ ಹಾಗೆ ಡ್ಯಾಫ್ನಿ ಮೇಲೆ ವೇಶ್ಯಾವಾಟಿಕೆ ಮಾಡುತ್ತಿದ್ದರು ಎನ್ನುವ ಆರೋಪ ಕೂಡ ಇದೆ. ಇದೇ ವಿಷಯವಾಗಿ ಫಿಫ್ಟಿ ಮತ್ತು ಡ್ಯಾಫ್ನಿ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ಕೂಡ ಆಗಿತ್ತು.