ವಾಷಿಂಗ್ಟನ್: ಸಾಮಾನ್ಯವಾಗಿ ಸೆಲಬ್ರೆಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ. ಆದರೆ ಹಾಲಿವುಡ್ನ ಖ್ಯಾತ ನಟಿ, ಗಾಯಕಿ ತನ್ನ ಬೆತ್ತಲೆ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಜನ್ಮದಿನವನ್ನು ಸಂಭ್ರಮಿಸಿದ್ದಾರೆ.
ಹಾಲಿವುಡ್ನ ಮೀನ್ ಗಲ್ರ್ಸ್, ಫ್ರೀಕಿ ಫ್ರೈಡೇ ಸಿನಿಮಾದ ನಟಿ ಲಿಂಡ್ಸೆ ಲೋಹನ್ ಜುಲೈ 2ರಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಡ್ಸೆ ಕನ್ನಡಿಯ ಮುಂದೆ ಬೆತ್ತಲಾಗಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Advertisement
ಈ ಫೋಟೋದಲ್ಲಿ ಲಿಂಡ್ಸೆ ಆಭರಣಗಳನ್ನು ಹೊರತಾಗಿ ಏನನ್ನೂ ಧರಿಸಿಲ್ಲ. ಹುಟ್ಟುಹಬ್ಬ ಆಚರಣೆಗೂ 2 ನಿಮಿಷ ಮುನ್ನ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
Advertisement
Advertisement
ಫೋಟೋ ಬೆನ್ನಲ್ಲೇ ಲಿಂಡ್ಸೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲಿಂಡ್ಸೆ ಒಳ ಉಡುಪುಗಳ ಮೇಲೆ ಬಿಳಿ ಬಣ್ಣದ ತೆಳುವಾದ ಶರ್ಟ್ ಧರಿಸಿದ ನೃತ್ಯ ಮಾಡಿದ್ದಾರೆ. ನೃತ್ಯ ಮಾಡುತ್ತಲೇ ಸೂರ್ಯನ ಕಿರಣಗಳ ಕಡೆಗೆ ಹೋಗಿ ನಗುತ್ತ ಮರಳಿದ್ದಾರೆ.
Advertisement
ಲಿಂಡ್ಸೆ ಲೋಹನ್ ಅಮೆರಿಕ ಮೂಲದವರಾಗಿದ್ದು, ನಟಿ, ನಿರ್ಮಾಪಕಿ, ಉದ್ಯಮಿ, ಫ್ಯಾಶನ್ ಡಿಸೈನರ್ ಹಾಗೂ ಗಾಯಕಿಯಾಗಿ ಹಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಲಿಂಡ್ಸೆ ಲೋಹನ್ ಜುಲೈ 2, 1986ರಂದು ನ್ಯೂಯಾರ್ಕ್ ನಲ್ಲಿ ಜನಿಸಿದ್ದಾರೆ. 33 ವರ್ಷದ ಲಿಂಡ್ಸೆ ಲೋಹನ್ ಎ ಲಿಟಲ್ ಮೋರ್ ಪರ್ಸನಲ್ (ರಾ), ಸ್ಪೀಕ್, ಮೋರ್ ಸೇರಿದಂತೆ ಅನೇಕ ಅಲ್ಬಂಬ್ಗಳನ್ನು ಮಾಡಿದ್ದಾರೆ.