Bengaluru CityCinemaKarnatakaLatestLeading NewsMain PostSandalwood

ಜನಪ್ರಿಯ ಬಲೂನ್ ಆಕ್ಟ್ ಕಲಾವಿದ ಶರವಣ ಧನಪಾಲ್ ನಿಧನ

ವಿಭಿನ್ನ ಪ್ರತಿಭೆ, ಬಲೂನ್ ಆಕ್ಟ್ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಕಲಾವಿದ ಶರವಣ (Saravana Dhanpal) ಧನಪಾಲ್ ವಿಧಿವಶರಾಗಿದ್ದಾರೆ. ಹಲವು ಕಡೆಗಳಲ್ಲಿ ಬಲೂನ್ ಆಕ್ಟ್‌ನಿಂದ (Ballon Act) ವೇದಿಕೆ ಕಾರ್ಯಕ್ರಮ ನೀಡುವ ಮೂಲಕ ಶರವಣ ಖ್ಯಾತಿ ಗಳಿಸಿದ್ದರು. ಇದೀಗ ಅನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ.

ಬಲೂನ್ ಆಕ್ಟ್‌ನಿಂದ ಜೀವನ ಸಾಗಿಸುತ್ತಿದ್ದ ಶರವಣ, ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು. ಬಳಿಕ ಅವರ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯರಾತ್ರಿ (ಸೆ.21) ಕೊನೆಯುಸಿರೆಳೆದಿದ್ದಾರೆ. ಹಾಲೋಮ್ಯಾನ್  ಶರವಣ (Saravana) ಸಾವಿಗೆ ಹಿತೈಷಿಗಳು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

ಇನ್ನು ಶರವಣ ಧನಪಾಲ್ ಸ್ಟೇಜ್ ಮೇಲೆ ಬಲೂನ್ ಆಕ್ಟ್ ಮಾಡುತ್ತಿದ್ದ ಮೋಡಿಗೆ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ರಮ್ಯಾ, ರಜನೀಕಾಂತ್ ಅವರು ಕೂಡ ಫಿದಾ ಆಗಿದ್ದರು.

Live Tv

Leave a Reply

Your email address will not be published.

Back to top button