ಬಾಗಲಕೋಟೆ: ಹೋಳಿ ಹುಣ್ಣಿಮೆ (Holi Hunnime) ಶುರುವಾಗುತ್ತಿದ್ದಂತೆ ಪಾದಯಾತ್ರೆ (Padyatra) ಮೂಲಕ ಶ್ರೀಶೈಲ ಮಲ್ಲಿಕಾರ್ಜುನನ (Sri Shaila Mallikarjuna) ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಬೆಳಗಾವಿ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆ ಸೇರಿದಂತೆ ಸುಮಾರು ಊರುಗಳಿಂದ ಪಾದಯಾತ್ರೆ ಮೂಲಕ ಹೋಗುವ ಯಾತ್ರಿಗಳು ಬೆಳಿಗ್ಗೆಯಿಂದ ಬಾಗಲಕೋಟೆ ಮಾರ್ಗವಾಗಿ ಶ್ರೀಶೈಲಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ನಿಷೇಧಿತ PFI ಮತ್ತೆ ಆಕ್ಟಿವ್? – ಅಕ್ರಮ ಪಿಸ್ತೂಲ್ ಮಾರಾಟ ಜಾಲ ಭೇದಿಸಿದ ಪೊಲೀಸರು
ಶ್ರೀಶೈಲ ಯಾತ್ರಿಗಳು ಹೋಗುವ ರಸ್ತೆಯುದ್ದಕ್ಕೂ ಭಕ್ತರು ಉಚಿತ ಊಟ, ಉಪಹಾರ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ.
ಬೆಳಿಗ್ಗೆಯಿಯಿಂದ ಪಾದಯಾತ್ರೆ ಮೂಲಕ ಬರುವ ಭಕ್ತ ಗಣಕ್ಕೆ ಜನರು ಹಾಲು, ಹಣ್ಣು, ಜ್ಯೂಸ್, ಸಿಹಿ ತಿಸಿಸು, ಮಜ್ಜಿಗೆ ನೀರು, ಕಲ್ಲಂಗಡಿ, ಈ ರೀತಿಯ ವ್ಯವಸ್ಥೆ ಕಲ್ಪಿಸಿ, ಶ್ರೀಶೈಲ ಮಲ್ಲಿಕಾರ್ಜುನನಿಗೆ ತಮ್ಮ ಭಕ್ತಿ ಪ್ರದರ್ಶಿಸುತ್ತಿದ್ದಾರೆ.