ಬೆಂಗಳೂರು: ಶ್ರೀ ಚೈತನ್ಯ ಮಹಾಪ್ರಭುಗಳ 536ನೇ ಜಯಂತಿ ಹಾಗೂ ಹೋಳಿ ಹಬ್ಬದ ಸಂಭ್ರಮಾಚರಣೆಯನ್ನು ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ಶುಕ್ರವಾರ ವೈಭವಯುತವಾಗಿ ಆಚರಿಸಲಾಯಿತು.
Advertisement
ಸಂಜೆ 6 ಗಂಟೆಗೆ ಶ್ರೀ ಚೈತನ್ಯ ಮಹಾಪ್ರಭುಗಳ ಉತ್ಸವಮೂರ್ತಿಯನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿಟ್ಟು, ದೇವಸ್ಥಾನದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಉತ್ಸವ ಮೂರ್ತಿಗಳಿಗೆ ಭವ್ಯವಾದ ಅಭಿಷೇಕ ನಡೆಯಿತು. ಇದನ್ನೂ ಓದಿ: ಟಿಬೆಟಿಯನ್ನರಿಗೆ ಹೂಸ ವರ್ಷದ ಸಂಭ್ರಮ – ವಿಶ್ವದ ಅತೀ ದೊಡ್ಡ ಪರದೆ ಅನಾವರಣ
Advertisement
Advertisement
ಈ ಸಂದರ್ಭದಲ್ಲಿ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಶ್ರೀ ಮಧುಪಂಡಿತ್ ದಾಸ್, ಉತ್ಸವದ ಆಚರಣೆಯ ಉದ್ದೇಶವನ್ನು ಪ್ರವಚನದ ಮೂಲಕ ತಿಳಿಸಿಕೊಟ್ಟರು. ಶಯನ ಆರತಿ ಮತ್ತು ಶಯನ ಪಲ್ಲಕ್ಕಿಯೊಂದಿಗೆ ಜಯಂತಿಯ ಸಂಭ್ರಮಾಚರಣೆ ಮುಕ್ತಾಯಗೊಂಡಿತು. ಇದನ್ನೂ ಓದಿ: ಗದ್ದುಗೆ ಏರಿದ ಶಿರಸಿ ಮಾರಿಕಾಂಬಾ – ಹರಿದುಬಂದ ಜನಸಾಗರ