ಬೆಂಗಳೂರು: ನಾಡಿನಾದ್ಯಂತ ಬಣ್ಣದ ಹಬ್ಬ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವಕ ಯುವತಿಯರು, ಚಿಣ್ಣರು ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಹೋಳಿಯಾಟದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಗಲ್ಲಿ, ಗಲ್ಲಿಗಳಲ್ಲಿ ರೇನ್ ಡಾನ್ಸ್ ಹಾಗೂ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಕುಣಿದಿದ್ದಾರೆ.
ದಾವಣಗೆರೆಯಲ್ಲಿ ಅದ್ದೂರಿಯಾಗಿ ಹೋಳಿ ಆಚರಣೆ ಮಾಡಲಾಯ್ತು. ನಗರದ ಎಲ್ಲಾ ಕಡೆ ಯುವ ಸಮೂಹ ಬಣ್ಣದೋಕುಳಿಯಲ್ಲಿ ಮಿಂದೆದ್ರು. ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಸಾವಿರಾರು ಯುವಕ ಯುವತಿಯರಿಂದ ಡಿಜೆ ಮ್ಯುಸಿಕ್‌ಗೆ ಹೆಜ್ಜೆ ಹಾಕಿದ್ರು. ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ್ರು.

ವಿದ್ಯಾಕಾಶಿ ಧಾರವಾಡದಲ್ಲಿ ಹೋಳಿ ಹಬ್ಬ ಆಚರಣೆ ಸಂಭ್ರಮ ಜೋರಾಗಿದೆ. ಹಬ್ಬದ ಆಚರಣೆಯ ಸಂಭ್ರಮದಲ್ಲಿ ಮಿಂದೆದ್ದ ಯುವಕರು ಯುವತಿಯರು ಡಿಜೆ ಸೌಂಡಿಗೆ ಹೆಜ್ಜೆ ಹಾಕಿದ್ದಾರೆ. ಶಾಸಕ ಅರವಿಂದ ಬೆಲ್ಲದ್ ಗೆಳೆಯರ ಬಳಗ, ಶಾಸಕ ವಿನಯ ಕುಲಕರ್ಣಿ ಬೆಂಬಲಿಗರಿಂದ ನಗರದ ಬೇರೆ ಬೇರೆ ಕಡೆ ರೆನ್ ಡಾನ್ಸ್ ಆಯೋಜನೆ ಮಾಡಲಾಗಿತ್ತು. ಡಿಜೆ ಸೌಂಡಿಗೆ ರೆನ್ ಡಾನ್ಸ್ ಮಾಡುತ್ತ ಯುವಕ ಯುವತಿಯರು ಸಂಭ್ರಮಪಟ್ಟರು. ಇದನ್ನೂ ಓದಿ: ಶ್ರೀಲಂಕಾ ಬಳಿ ಅಮೆರಿಕದ ಸಬ್‌ಮೆರಿನ್ ಡಿಕ್ಕಿ; ಇರಾನ್ ನೌಕೆ ಮುಳುಗಡೆ

ಇನ್ನು ಕೊಪ್ಪಳದಲ್ಲೂ ಬಣ್ಣದ ಹಬ್ಬದ ಸಂಭ್ರಮ ಜೋರಾಗಿತ್ತು. ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ ಹೋಳಿ ರಂಗಿನಾಟದಲ್ಲಿ ಯುವಕ, ಯುವತಿಯರು ಪಾಲ್ಗೊಂಡು ಸಂಭ್ರಮಿಸಿದ್ರು. ರೇನ್ ಡ್ಯಾನ್ಸ್, ಡಿಜೆ ಸೌಂಡ್ ಮೇಳೈಸಿತ್ತು. ವಿಜಯಪುರದಲ್ಲಿ ರಂಗಿನ ಹಬ್ಬ ಹೋಳಿಯ ಸಂಭ್ರಮ ಮನೆಮಾಡಿದೆ. ಗಲ್ಲಿ, ಗಲ್ಲಿಗಳಲ್ಲಿ ರೇನ್ ಡಾನ್ಸ್ ಹಾಗೂ ಡಿಜೆ ಸದ್ದು ಕಂಡು ಬಂತು. ವಿಜಯಪುರ ನಗರದ ಶಾರದಾ ಕಾಲೋನಿಯಲ್ಲಿ ರೇನ್ ಡಾನ್ಸ್ಗೆ ಚಿಕ್ಕ ಮಕ್ಕಳು, ಯುವಕರು ಕುಣಿದು ಕುಪ್ಪಳಿಸಿದರು. ಬಡವಾಣೆಯ ಜನರು ಹೋಳಿ ಹಬ್ಬದಲ್ಲಿ ಮಿಂದೆದ್ದರು.

ಬಾಗಲಕೋಟೆ ಜಿಲ್ಲೆಯಲ್ಲಿ ಹೋಳಿ ಹಬ್ಬದ ಸಂಭ್ರಮ ಮಾನೆ ಮಾಡಿತ್ತು. ಜಮಖಂಡಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೀತು. ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಹಲಗೆ ಹಬ್ಬದಲ್ಲಿ ವಿವಿಧ ಮಠಾಧೀಶರು, ಶಾಸಕ ಜಗದೀಶ ಗುಡಗುಂಟಿ ಸೇರಿ ಗಣ್ಯರು ಭಾಗಿಯಾಗಿದ್ರು.

ಹೋಳಿ ಹಬ್ಬದ ಅಂಗವಾಗಿ ಬಳ್ಳಾರಿ ನಗರದಲ್ಲಿ ಹೋಳಿಯಾಟದ ಸಂಭ್ರಮ ಜೋರಾಗಿದೆ. ಬೆಳಗ್ಗೆಯಿಂದಲೇ ಬಣ್ಣಗಳ ಆಟ ಶುರುವಾಗಿ, ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಡಿಜೆ ಸೌಂಡ್‌ಗೆ ಮಹಿಳೆಯರು, ಯುವತಿಯರು, ಯುವಕರು ಹೆಜ್ಜೆ ಹಾಕಿ, ನೃತ್ಯ ಮಾಡಿ ಹಬ್ಬದ ಉತ್ಸಾಹ ಹೆಚ್ಚಿಸಿದರು. ಒಟ್ನಲ್ಲಿ ನಾಡಿನಾದ್ಯಂತ ಹೋಳಿ ಸಂಭ್ರಮ ಜೋರಾಗಿತ್ತು. ರಂಗಿನಾಟದಲ್ಲಿ ಮಿಂದೆದ್ದ ಯುವಕ ಯುವತಿಯರು, ಪರಸ್ಪರ ಬಣ್ಣ ಎರಚಿ ಕೇಕೆ ಹಾಕಿ ಕುಣಿದು ಕುಪ್ಪಳಿಸಿದ್ರು.ಇದನ್ನೂ ಓದಿ: KPSC ಪರೀಕ್ಷೆಯಲ್ಲಿ ಮತ್ತೆ ಗೊಂದಲ – 384 ಗೆಜೆಟೆಡ್ ಹುದ್ದೆಗಳ ಸಂದರ್ಶನ ಪಟ್ಟಿಯಲ್ಲಿ ಅಕ್ರಮ ಆರೋಪ

