ಹೋಳಿ ಹಬ್ಬವು ಹಿಂದೂಗಳ ಅತ್ಯಂತ ಪ್ರಸಿದ್ಧ ಮತ್ತು ದೇಶಾದ್ಯಂತ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ. ಹೋಳಿ (Holi) ಅಥವಾ ಓಕುಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಫಾಲ್ಗುಣ ಮಾಸದ ಹುಣ್ಣಿಮೆ ತಿಥಿಯಂದು ಅಂದರೆ ಮಾರ್ಚ್.25ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು.
ಹೋಳಿ ಹಬ್ಬ (Holi Festival) ಭಾರತೀಯ ಸಂಸ್ಕೃತಿಯ ಸಂಕೇತ. ಹೋಳಿ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ನೆನಪಾಗುವುದು ಬಣ್ಣ. ಒಬ್ಬರು ಮತ್ತೊಬ್ಬರಿಗೆ ಬಣ್ಣ ಹಚ್ಚುವುದು. ಅನೇಕ ಸಿನಿಮಾಗಳಲ್ಲಿಯೂ ನಾವು ಹೋಳಿ ಹಬ್ಬದ ಸಡಗರವನ್ನು ನೋಡಿದ್ದೇವೆ. ಅದೇ ರೀತಿ ಹೋಳಿ ಹಬ್ಬವನ್ನು ನೆನಪಿಸುವ ಸಿನಿಮಾಗಳ ಹಾಡುಗಳ ಪಟ್ಟಿ ಇಲ್ಲಿದೆ.
Advertisement
Advertisement
ಹೋಳಿ ಹೋಳಿ ಸಾಂಗ್: ರಿಯಲ್ ಸ್ಟಾರ್ ಉಪೇಂದ್ರ, ಶಿವಣ್ಣ ನಟನೆಯ ‘ಪ್ರೀತ್ಸೇ’ (Preethse) ಸಿನಿಮಾದ ಈ ಹಾಡು ಕೂಡಾ ಹೋಳಿ ಹಬ್ಬಕ್ಕೆ ಮೆರಗು ನೀಡಲಿದೆ. ಡಾ.ರಾಜೇಂದ್ರ ಬಾಬು ನಿರ್ದೇಶನದ ಶಿವಣ್ಣ, ಉಪೇಂದ್ರ, ಸೋನಾಲಿ ಬೇಂದ್ರೆ, ಅನಂತನಾಗ್ ನಟಿಸಿದ್ದರು. ರಾಕಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. 1993ರಲ್ಲಿ ತೆರೆಕಂಡ ಹಿಂದಿ ‘ಡರ್’ ಚಿತ್ರದ ರೀಮೇಕ್ ಆಗಿತ್ತು.
Advertisement
Advertisement
ರಂಗು ರಂಗಿನ ಹೋಳಿ: ದರ್ಶನ್, ನವ್ಯಾ ನಟನೆಯ ‘ಕಿಟ್ಟಿ’ (Kitty) ಸಿನಿಮಾದ ಹಾಡು ಇದಾಗಿದ್ದು, ಕಿಟ್ಟಿ-ಪ್ರಿಯಾ ಲವ್ ಸ್ಟೋರಿ ಪ್ರೇಕ್ಷಕರಿಗೆ ಮುದ ನೀಡಿತ್ತು. 2002ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಅದರಲ್ಲಿ ರಂಗು ರಂಗಿನ ಹೋಳಿ ಹಾಡು ಚಿತ್ರದ ಹೈಲೆಟ್ ಆಗಿತ್ತು.
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ: ‘ಪುಟ್ನಂಜ’ ಸಿನಿಮಾದ ಹಾಡು ಇದಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಿರ್ಮಿಸಿ, ನಾಯಕನಾಗಿ ನಟಿಸಿದ್ದ ‘ಪುಟ್ನಂಜ’ ಸಿನಿಮಾ ‘ರಂಗೇರೋ ಹೋಳಿ’ ಹಾಡು ಕೂಡ ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸಲಿದೆ. ಈ ಸಿನಿಮಾದಲ್ಲಿ ತಮಿಳು ನಟಿ ಮೀನಾ ನಾಯಕಿಯಾಗಿ ನಟಿಸಿದ್ದರು. ರವಿಚಂದ್ರನ್ ಅವರ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಉಮಾಶ್ರೀ ಫಿಲ್ಮ್ ಪೇರ್ ಪ್ರಶಸ್ತಿ ಪಡೆದರು. ಈ ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತವಿತ್ತು.
ಬಣ್ಣ ನನ್ನ ಒಲಿವಿನ ಬಣ್ಣ: ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಮತ್ತು ಸುಹಾಸಿನಿ ನಟನೆಯ ‘ಬಂಧನ’ (Bandhana) ಸಿನಿಮಾ ಇಂದಿಗೂ ಎಲ್ಲರ ಫೇವ್‌ರೇಟ್. ಈ ಸಿನಿಮಾದ ‘ಬಣ್ಣ ನನ್ನ ಒಲಿವಿನ ಬಣ್ಣ’ ಹಾಡು ನಿಮ್ಮ ಹೋಳಿ ಹಬ್ಬವನ್ನು ರಂಗೇರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ‘ಬಂಧನ’ ಸಿನಿಮಾ 32ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು. ಹಾಗೇ ನಾಯಕ ವಿಷ್ಣುವರ್ಧನ್ ಮತ್ತು ಸಂಗೀತ ನಿರ್ದೇಶಕ ಎಂ.ರಂಗಾರಾವ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು.
ನೀ ನನ್ನ ಒಲವು: ಗೋಲ್ಡನ್ ಸ್ಟಾರ್ ಗಣೇಶ್- ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ‘ಚಮಕ್’ (Chamak) ಸಿನಿಮಾದ ‘ನೀ ನನ್ನ ಒಲವು’ ಹಾಡಿನಲ್ಲಿ ಕೂಡ ಹೋಳಿಯ ರಂಗಿದೆ. ಈ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು. ಗಣೇಶ್ ಮತ್ತು ರಶ್ಮಿಕಾ ನಟನೆಯ ‘ನೀ ನನ್ನ ಒಲವು ಹಾಡು’ ಸಿನಿಮಾ ಹೈಲೆಟ್ ಆಗಿತ್ತು.
ಕಾಮಣ್ಣನ ಮಕ್ಕಳು: ಉಪೇಂದ್ರ ಹಾಗೂ ಶಿವಣ್ಣ ಅಭಿನಯದ ‘ಲವ ಕುಶ’ ಸಿನಿಮಾದ ಕಾಮಣ್ಣನ ಮಕ್ಕಳು ಹಾಡು ಕೂಡಾ ಹೋಳಿ ಹಬ್ಬವನ್ನು ಆಚರಿಸಲು ಉತ್ಸಾಹ ನೀಡುತ್ತದೆ. ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಸಿನಿಮಾಗೆ ಗುರುಕಿರಣ್ ಸಂಗೀತ ನೀಡಿದ್ದರು.
ಬಾಲಮ್ ಪಿಚ್ಕರಿ: ಯೇ ಜವಾನಿ ಹೈ ದಿವಾನಿ ಚಿತ್ರದ ಸಾಂಗ್ ಇದಾಗಿದೆ. ಹೋಳಿ ಹಬ್ಬಕ್ಕೆ ಸಂಬಂಧಪಟ್ಟ ಮತ್ತೊಂದು ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಹಾಡು ಇದಾಗಿದೆ. ಈ ಹಾಡಿನಲ್ಲಿ ರಣ್‌ಬೀರ್ ಕಪೂರ್, ದೀಪಿಕಾ ಪಡುಕೋಣೆ (Deepika Padukone) ಕುಣಿದು ಕುಪ್ಪಳಿಸಿದ್ದರು.
ರಂಗ್ ಬರ್ಸೆ: ‘ಸಿಲ್ಸಿಲಾ’ ಚಿತ್ರದ ಸೂಪರ್ ಹಿಟ್ ಹೋಳಿ ಹಾಡಿದು. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ರೇಖಾ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ಅಧ್ಬುತವಾಗಿ ಮೂಡಿ ಬಂದಿತ್ತು. ಈ ಹಾಡನ್ನು ಸ್ವತಃ ಬಿಗ್ ಬಿ ಅವರೇ ಹಾಡಿದ್ದರು.