ಚಿತ್ರದುರ್ಗ: ರಾಜಸ್ಥಾನ ಮೂಲದ ಬಟ್ಟೆ ವ್ಯಾಪಾರಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.
ಕೊಲೆಯಾದ ಮೂಲ್‍ಸಿಂಗ್ (30) ಆರು ವರ್ಷಗಳಿಂದ ಹೊಳಲ್ಕೆರೆ ಪಟ್ಟಣದಲ್ಲಿ ಪ್ರಿಯದರ್ಶಿನಿ ಟೆಕ್ಸ್ ಟೈಲ್ಸ್ ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ 9 ಗಂಟೆಗೆ ಅಂಗಡಿ ಬಂದ್ ಮಾಡಲು ಪೂಜೆ ಮಾಡ್ತಿದ್ದ ವೇಳೆ ಮೂಲ್‍ಸಿಂಗ್ ಕುತ್ತಿಗೆ ಭಾಗಕ್ಕೆ ಶೂಟ್‍ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗುಂಡಿಕ್ಕಿದ ಆರೋಪಿಗಳು ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಇನ್ನು ಶೂಟೌಟ್ ನಿಂದಾಗಿ ಮೂಲಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲ್‍ಸಿಂಗ್ ರಾಜಸ್ಥಾನದ ಸರ್ದಾರ್ ಪುರ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಹೊಳಲ್ಕೆರೆಯಲ್ಲಿ ವಾಸವಾಗಿದ್ದರು. 5 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ ಕಲ್ಯಾಣಸಿಂಗ್ ಎಂಬ ಬಟ್ಟೆ ವ್ಯಾಪಾರಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣದ ಆರೋಪಿಯಾಗಿದ್ದರು.
Advertisement
Advertisement
ಆ ದ್ವೇಷದ ಹಿನ್ನೆಲೆಯಲ್ಲೂ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರೂ ಅಪರಿಚಿತ ವ್ಯಕ್ತಿಗಳು ಕೊಲೆ ಮಾಡಿ ತಕ್ಷಣ ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್.ಪಿ.ರಾಧಿಕಾ, ಎಎಸ್‍ಪಿ ನಂದಗಾವಿ ಹಾಗೂ ಡಿವೈಸ್‍ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಎದುರೇ ಸಿದ್ದರಾಮಯ್ಯಗೆ ಜೈಕಾರ ಕೂಗಿದ ವ್ಯಕ್ತಿ
ಬಟ್ಟೆ ಅಂಗಡಿಯಲ್ಲಿನ ಸಿಸಿಟಿವಿ ವೀಡಿಯೋ ಕೂಡ ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದ್ದು, ಕೃತ್ಯದ ಆರೋಪಿಗಳ ಸೆರೆಗಾಗಿ ಬಲೆ ಬೀಸಿದ್ದಾರೆ. ಆದ್ರೆ ಮೃತನ ಸಹೋದರ ಗೋವರ್ಧನ್ ಸಿಂಗ್ ಮಾತ್ರ ನಮ್ಮ ಮೇಲೆ ಯಾವುದೇ ದ್ವೇಷವಿರಲಿಲ್ಲ. ನಾವು ಸಹ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದೇವು. ಹೀಗಾಗಿ ಈ ಕೃತ್ಯದ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:60 ವರ್ಷದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಮೋದಿ ಅವಧಿಯಲ್ಲಿ ನಡೆದಿದೆ: ರಾಜೀವ್ ಚಂದ್ರಶೇಖರ್
ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏರಿಕೆಯಾಯ್ತು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ