LatestMain PostSports

ಹಾಕಿ ಏಷ್ಯಾ ಕಪ್ 2022: ಭಾರತಕ್ಕೆ ಕಂಚಿನ ಪದಕ

ನವದೆಹಲಿ: ಹಾಕಿ ಏಷ್ಯಾ ಕಪ್‍ನಲ್ಲಿ ಭಾರತದ ರಾಜ್‍ಕುಮಾರ್ ಪಾಲ್ ಬಾರಿಸಿದ ಸೊಗಸಾದ ಗೋಲಿನ ನೆರವಿನಿಂದ ಭಾರತವು 1-0 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಜಕಾರ್ತಾನ ಹಾಕಿ ಕ್ರೀಡಾಂಗಣದಲ್ಲಿ ಇಂದು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಿದ ಭಾರತ ಮೊದಲ ಕ್ವಾರ್ಟರ್‌ನಲ್ಲಿಯೇ ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಪಂದ್ಯದ ಆರಂಭದಲ್ಲಿ ತಂಡವು ಒಂದು ಗೋಲಿನಿಂದ ಮುನ್ನಡೆ ಸಾಧಿಸಿತು, ನಂತರದಲ್ಲಿ ಜಪಾನಿನ ಯಾವುದೇ ಸಂಭಾವ್ಯ ದಾಳಿಗೆ ಆಸ್ಪದ ನೀಡದೇ ಪಂದ್ಯವನ್ನು ಕೈವಶಮಾಡಿಕೊಳ್ಳುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಇದನ್ನೂ ಓದಿ: ಚಾಂಪಿಯನ್ ತಂಡವನ್ನು ಗೌರವಿಸಿದ ಗುಜರಾತ್ ಸರ್ಕಾರ – ಹಾರ್ದಿಕ್ ಪಾಂಡ್ಯಗೆ ವಿಶೇಷ ಉಡುಗೊರೆ

ಹಾಲಿ ಚಾಂಪಿಯನ್ ಕೊರಿಯಾ ವಿರುದ್ಧ ರೋಚಕ 4-4 ಡ್ರಾ ನಂತರ ಟೂರ್ನಿಯ ಫೈನಲ್ ಪ್ರವೇಶಿಸಲು ಭಾರತವು ವಿಫಲವಾಯಿತು. ಸೂಪರ್ 4ರ ಪೂಲ್ ಟೇಬಲ್‍ನಲ್ಲಿ ಗೋಲುಗಳ ವ್ಯತ್ಯಾಸದಿಂದಾಗಿ ಭಾರತ ಫೈನಲ್‍ಗೆ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು. ಇದೀಗ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದೆ. ಇದನ್ನೂ ಓದಿ: ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಶೋಯೆಬ್ ಅಕ್ತರ್

Leave a Reply

Your email address will not be published.

Back to top button