– HMPV ಲಕ್ಷಣಗಳೇನು? ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
– ಕರ್ನಾಟಕ, ಚೆನ್ನೈನಲ್ಲಿ ತಲಾ 2, ಗುಜರಾತ್, ಕೋಲ್ಕತ್ತಾದಲ್ಲಿ ತಲಾ 1 HMPV ಕೇಸ್
– ಕರ್ನಾಟಕ, ಚೆನ್ನೈನಲ್ಲಿ ತಲಾ 2, ಗುಜರಾತ್, ಕೋಲ್ಕತ್ತಾದಲ್ಲಿ ತಲಾ 1 HMPV ಕೇಸ್
ನವದೆಹಲಿ: 2019ರ ಡಿಸೆಂಬರ್ ವೇಳೆಗೆ ಚೀನಾದಲ್ಲಿ ಕಾಣಿಕೊಂಡಿದ್ದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಕಾಡಿತ್ತು. ಇದೀಗ ಚೀನಾದಿಂದಲೇ ಹಬ್ಬಿದ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ರಾಜ್ಯದ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಮಕ್ಕಳಲ್ಲೇ ವೈರಸ್ ಕಾಣಿಸಿಕೊಂಡಿದ್ದು, ಪೋಷಕರನ್ನು ಚಿಂತೆಗೀಡುಮಾಡಿದೆ. ಈ ನಡುವೆ ಜನರ ಆತಂಕ ದೂರ ಮಾಡುವ ಕೆಲಸವನ್ನು ತಜ್ಞ ವೈದ್ಯರು ಮಾಡಿದ್ದಾರೆ.
ಕರ್ನಾಟಕ, ತಮಿಳುನಾಡು, ಗುಜರಾತ್, ಪ. ಬಂಗಾಳದಲ್ಲಿ ಕಾಣಿಸಿಕೊಂಡಿರುವ ಹೆಚ್‌ಎಂಪಿವಿ ಹೊಸತೇನಲ್ಲ, ಇದೂ ಹಾನಿಕಾರಕವೂ ಅಲ್ಲ. 2001ರಲ್ಲಿ ಮೊದಲಬಾರಿಗೆ ಗುರುತಿಸಲಾದ ಈ ವೈರಸ್ ಹಲವು ವರ್ಷಗಳಿಂದ ಜಾಗತೀಕವಾಗಿ ಅಸ್ತಿತ್ವದಲ್ಲಿದೆ. ಹಾಗಾಗಿ ಜನರು ಆತಂಕ ಪಡಬೇಕಿಲ್ಲ. ಹಾಗಂತ ನಿರ್ಲಕ್ಷ್ಯವೂ ಮಾಡುವಂತಿಲ್ಲ ಅಂತ ಐಸಿಎಂಆರ್ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಅಲ್ಲದೇ ಈ ವೈರಸ್ ಲಕ್ಷಣಗಳೇನು? ಹೇಗೆ ಹರಡುತ್ತದೆ? ಅನ್ನೋದರ ಕುರಿತು ಕಿಮ್ಸ್‌ನ ಮೈಕ್ರೋ ಬಯಲಾಜಿ ವಿಭಾಗದ ಡಾ. ಗಿರಿಧರ್ ಉಪಾಧ್ಯಯ ವರದಿಯೊಂದನ್ನ ಸಿದ್ಧಪಡಿಸಿದ್ದಾರೆ.
Advertisement
HMPV – (ಹ್ಯೂಮನ್ ಮೈಕ್ರೋಪ್ಲಾಸ್ಮಾ ನ್ಯುನೋನಿಯಾ) ಸೋಂಕು.
Advertisement
ಏನಿದರ ಗುಣಲಕ್ಷಣಗಳು?
* ಕಫ
* ಶೀತ
* ಗಂಟಲು ನೋವು
* ಜ್ವರ
* ಸೀನುವುದು
* ನ್ಯೂಮೋನಿಯಾ ಮಾದರಿ ಲಕ್ಷಣ
Advertisement
ಇದು ಹೇಗೆ ಹರಡುತ್ತದೆ?
* ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಒಬ್ಬರಿಂದ ಒಬ್ಬರಿಗೆ ಹರಡಲಿದೆ.
* ಸೋಂಕಿತ ವ್ಯಕ್ತಿ ಕೆಮ್ಮಿದಾಗ ಸೀನಿದಾಗ ಹೊರಬಂದ ದ್ರಾವಣವನ್ನು ಮುಟ್ಟಿ ಅದೇ ಕೈನಿಂದ ಕಣ್ಣು, ಮೂಗು, ಬಾಯಿ ಮುಟ್ಟಿದಾಗಲೂ ಹರಡಬಹುದು.
Advertisement
ಈ ವೈರಸ್‌ಗೆ ಚಿಕಿತ್ಸೆ ಇದ್ಯಾ?
* HMPVಗೆ ಪ್ರತ್ಯೇಕ ಚಿಕಿತ್ಸೆ ಇಲ್ಲ
* ಸೋಂಕಿತ ವ್ಯಕ್ತಿ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು
* ಗುಣಲಕ್ಷಣಗಳನ್ನು ಆಧರಿಸಿ ಔಷಧ ತೆಗೆದುಕೊಳ್ಳಬಹುದು
* ನೀರಿನಾಂಶ ಇರುವ ಆಹಾರ ಹಣ್ಣುಗಳ ಸೇವನೆ
* ಗಂಭೀರ ಸ್ವರೂಪಕ್ಕೆ ತಿರುಗಿದಾಗ ಆಸ್ಪತ್ರೆಗೆ ಹೋಗಬೇಕು.
ತಡೆಗಟ್ಟುವುದು ಹೇಗೆ?
* ಮಾಸ್ಕ್ ಧರಿಸುವಿಕೆ
* ಕೈಗಳನ್ನು 20 ಸೆಕೆಂಡುಗಳ ಕಾಲ ಸೋಪಿನಿಂದ ತೊಳೆಯಬೇಕು
* ಸೋಂಕಿತರೊಂದಿಗೆ ಅಂತರ ಕಾಯ್ದಕೊಳ್ಳಬೇಕು.
ಯಾರಿಗೆಲ್ಲ ಸೋಂಕು ಬೇಗ ತಗುಲುವ ಸಾಧ್ಯತೆ?
* 5 ವರ್ಷದೊಳಗಿನ ಮಕ್ಕಳು
* ವಯೋವೃದ್ಧರು
* ರೋಗನಿರೋಧಕ ಶಕ್ತಿ ಕಡಿಮೆ ಇರುವವರು
* ಶ್ವಾಸಕೋಶ ಹಾಗೂ ಹೃದಯಸಂಬಂಧಿ ಸಮಸ್ಯೆ ಇರುವವರು
ಏನೆಲ್ಲ ಗಂಭೀರ ಸಮಸ್ಯೆ ಬರಬಹುದು?
* ನ್ಯೂಮೋನಿಯಾ
* ಬ್ರ್ಯಾಂಕೈಟಿಸ್
* ಆಸ್ತಮಾ
* ಕಿವಿಯ ಸೋಂಕು
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
* ಉಸಿರಾಟದ ತೊಂದರೆ ಎದುರಾದಾಗ
* ಉಸಿರಾಟದ ವೇಗ ಹೆಚ್ಚಾದಾಗ
* ಏದುಸಿರು ಸಮಸ್ಯೆ ಎದುರಾದಗ
* ತುಟಿ ಹಾಗೂ ಉಗುರಿನ ಸುತ್ತಾ ನೀಲಿ ಅಥವಾ ಬೂದು ಬಣ್ಣದ ಛಾಯೆ ಕಾಣಿಸಿದಾಗ
* ಹೆಚ್ಚಿನ ಜ್ವರ ಕಾಣಿಸಿದಾಗ
* ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಸಮಸ್ಯೆ ಎದುರಾದಾಗ