-ಜಾತಿ,ಆರ್ಥಿಕ ಗಣತಿಗೆ ಸರ್ಕಾರ ಸಬೂಬು ಹೇಳುತ್ತ ಮುಂದೂಡುತ್ತಿದೆ
ರಾಯಚೂರು: ಕೆ.ಎಸ್.ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ. ರಾಯಣ್ಣ ಬ್ರಿಗೇಡ್ ಅರ್ಧಕ್ಕೆ ಬಿಟ್ಟು ಹೋದರು, ಕನಕಗೋಪುರ ವಿಚಾರನೂ ಅಷ್ಟೇ. ಜಾತಿ ಗಣತಿ ವರದಿ ತರಬೇಕು ಅಂತ ನಾನು, ಸಿದ್ದರಾಮಯ್ಯ, ಈಶ್ವರಪ್ಪ ಸೇರಿ ಎಲ್ಲಾ ಪಕ್ಷದ ಮುಖಂಡರು ಸಭೆ ಮಾಡಿದ್ದೇವು. ಈಗ ಈಶ್ವರಪ್ಪನವರು ಮಾತು ಬದಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಆರೋಪಿಸಿದರು.
Advertisement
ರಾಯಚೂರಿನಲ್ಲಿ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ ಹದಿಮೂರು ಗ್ರಂಥಗಳ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದುಳಿದ ಸಮುದಾಯಗಳ ಜಾತಿ ಮತ್ತು ಆರ್ಥಿಕ ಗಣತಿ ವಿಳಂಬಕ್ಕೆ ಸರ್ಕಾರ ಕೇವಲ ಸಬೂಬು ನೀಡುತ್ತಿದೆ. ಪ್ರಥಮವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದವರು ಮೈಸೂರು ಅರಸರು. ಸಿದ್ದರಾಮಯ್ಯ ಸಿಎಂ ಇದ್ದಾಗ 172 ಕೋಟಿ ರೂ. ನೀಡಿ ಆರುವರೆ ಕೋಟಿ ಜನರ ಸಮೀಕ್ಷೆ ಮಾಡಿಸಿದ್ದರು ಎಂದರು. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ
Advertisement
Advertisement
ಸರ್ಕಾರ ಬದಲಾದ ನಂತರ ಸಿಎಂ ಕುಮಾರಸ್ವಾಮಿ ಜೊತೆ ಜಾರಿ ಮಾಡುವಂತೆ ಕೇಳಿದಾಗ ಒಪ್ಪಲಿಲ್ಲ. ಇದೀಗ ಇರುವ ಸರ್ಕಾರ ಕೂಡ ಸಬೂಬು ಹೇಳುತ್ತಿದೆ, ಎಲ್ಲರೂ ಡ್ರಾಫ್ಟ್ ಗೆ ಸಹಿ ಹಾಕಿದ್ದಾರೆ. ಅಕ್ಟೋಬರ್ 30ರ ನಂತರ ಬೆಂಗಳೂರು ಚಲೋ ಚಳುವಳಿ ಮಾಡುವ ಚಿಂತನೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ
Advertisement