ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ವಿಚಾರ ಲಭ್ಯವಾಗಿದೆ. ಬಂಧಿತ ಆರೋಪಿ ಹಿಜ್ಬುಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂಬ ಮಾಹಿತಿ ಇದೀಗ ಸಿಕ್ಕಿದೆ.
ಬೆಂಗಳೂರಿನಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದ ತಾಲಿಬ್ ಹುಸೇನ್ ಕಳೆದ 6 ವರ್ಷದ ಹಿಂದೆ ಹಿಜ್ಬುಲ್ ಸಂಘಟನೆಯಲ್ಲಿ ಕಾರ್ಯಕರ್ತನಾಗಿದ್ದ. ಈ ಹಿಜ್ಬುಲ್ ಸಂಘಟನೆಯಲ್ಲಿ ಆತನನ್ನು ಕಮಾಂಡೋ ಎನ್ನುವ ರೀತಿಯಲ್ಲಿ ಈತನ ಬಿಂಬಿಸಲಾಗುತ್ತಿತ್ತು. ಈ ಹಿಜ್ಬುಲ್ ಸಂಘಟನೆ ಹಿಂದೂ ಕಾರ್ಯಕರ್ತರ ಹತ್ಯೆ ಮಾಡುವ ಸಂಘಟನೆಯಾಗಿದೆ ಎಂದು ಮೂಲಗಳನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿದೆ.
ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರ ಸಹಾಯ ಪಡೆದ ಜಮ್ಮು – ಕಾಶ್ಮೀರದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಬಗ್ಗೆ ಜಮ್ಮು- ಕಾಶ್ಮೀರದ ಐಜಿಪಿ ಅವರು ಹಿಜ್ಬುಲ್ ಸಂಘಟನೆಯಲ್ಲಿ ಇರುವುದನ್ನು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್‌ರ ಒಂದು ಕೂದಲಿಗೆ ಹಾನಿಯಾದರೂ ನಾನೇ ಆತ್ಮಹತ್ಯಾ ದಾಳಿ ನಡೆಸುತ್ತೇನೆ: ಪಾಕ್ ಶಾಸಕನ ಬೆದರಿಕೆ
ಜಮ್ಮು ಕಾಶ್ಮೀರದ ನಿವಾಸಿಯಾಗಿದ್ದ ಶಂಕಿತ ಉಗ್ರ ತಾಲಿಬ್ ಹುಸೇನ್ ಕಳೆದ 6 ವರ್ಷಗಳಿಂದ ಬೆಂಗಳೂರಿನ ಶ್ರೀರಾಮಪುರ ಮಸೀದಿ ಬಳಿ ವಾಸವಾಗಿದ್ದ. ಆದರೆ ಆತನಿಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಲಿಂಕ್ ಇರುವ ಹಿನ್ನೆಲೆಯಲ್ಲಿ ಜಮ್ಮು ಪೊಲೀಸರ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆಸಿ ತಾಲಿಬ್ ಹುಸೇನ್‍ನನ್ನು ಕಳೆದ ಭಾನುವಾರ ಬಂಧಿಸಿದ್ದರು. ಆ ವೇಳೆ ಹುಸೇನ್ ನಗರದಲ್ಲಿ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ. ಇದನ್ನೂ ಓದಿ: ಬೆಂಗಳೂರು ವ್ಯಕ್ತಿ ಅರೆಸ್ಟ್ ಕೇಸ್- ಮಸೀದಿ ಬಳಿ ನೆಲೆಸಿದ್ದವನಿಗೆ ಇತ್ತಾ ಉಗ್ರರ ಜೊತೆ ನಂಟು?