ಮುಂಬೈ: 15ನೇ ಐಪಿಎಲ್ ಆವೃತ್ತಿಗೆ ಹೊಸ ತಂಡಗಳಾಗಿ ಸೇರ್ಪಡೆಗೊಂಡರೂ ಅಬ್ಬರ ಆಟದಿಂದ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮಿಂಚುತ್ತಿವೆ. ಆದರೆ 5 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಸತತ 5 ಪಂದ್ಯಗಳಲ್ಲಿ ಸೋತು, ಟೀಕೆಗಳಿಗೆ ಗುರಿಯಾಗಿದೆ.
ರೋಹಿತ್ ಶರ್ಮಾ ನಾಯಕತ್ವವಿದ್ದರೆ ಗೆಲುವು ಬಹುತೇಕ ಖಚಿತ ಎನ್ನುತ್ತಿದ್ದವರು, ಸರಣಿ ಸೋಲಿನಿಂದಾಗಿ ಟೀಕೆ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ರೋಹಿತ್ ಶರ್ಮಾಗೆ ಬ್ಯಾನ್ ಭೀತಿ ಶುರುವಾಗಿದೆ. ಇದನ್ನೂ ಓದಿ: 7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ
Advertisement
Advertisement
ಹೌದು. ರೋಹಿತ್ ಶರ್ಮಾ ಸರಣಿ ಪಂದ್ಯಗಳಲ್ಲಿ ತಮ್ಮ ನಾಯಕತ್ವ ವಿಫಲವಾಗುತ್ತಿರುವ ತಲೆ ಬಿಸಿಯ ನಡುವೆಯೇ ಪಂದ್ಯದಿಂದ ನಿಷೇಧವಾಗುವ ಭಯದಲ್ಲಿದ್ದಾರೆ. ಈ ನಿಷೇಧದಿಂದ ತಪ್ಪಿಸಿಕೊಳ್ಳಲು ಮುಂದಿನ ಪಂದ್ಯಗಳಲ್ಲಿ ಎಚ್ಚರಿಕೆಯ ಆಟವನ್ನು ಆಡಲೇಬೇಕಿರುವ ರೋಹಿತ್ ಶರ್ಮಾ ನಿಷೇಧದಿಂದ ತಪ್ಪಿಸಿಕೊಳ್ಳುತ್ತಾರಾ ಎನ್ನುವುದು ಕಾದುನೋಡಬೇಕಿದೆ.
Advertisement
ಲಕ್ನೋ ವಿರುದ್ಧ ಗೆಲವು ಅನಿವಾರ್ಯ: ಸತತ 5 ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂದಿನ ಲಕ್ನೋ ಸೂಪರ್‌ಜೈಂಟ್ಸ್ ತಂಡ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ. ಅದಕ್ಕಾಗಿ ರೋಹಿತ್ ಶರ್ಮಾ ಹೊಸ ಆಲೋಚನಾ ಕ್ರಮ ಅನುಸರಿಸಲಿದ್ದಾರೆ. ಈ ಕುರಿತು ನೆನ್ನೆಯಷ್ಟೇ ಪ್ರತಿಕ್ರಿಯೆಯನ್ನೂ ನೀಡಿದ್ದರು.
Advertisement
ಬ್ಯಾನ್ ಭೀತಿಗೆ ಕಾರಣವೇನು?: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈವರೆಗೆ ನಡೆದ ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದು, ದಂಡ ತೆತ್ತಿದೆ. ಈ ಬಾರಿ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಇದೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣ ನಾಯಕ ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡ ಕೂಡ ವಿಧಿಸಲಾಗಿತ್ತು. ಇನ್ನೂ ಕೊನೆಯದ್ದಾಗಿ ಆಡಿದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ನಿಧಾನಗತಿಯ ಬೌಲಿಂಗ್‌ನಿಂದ 24 ಲಕ್ಷ ದಂಡ ತೆತ್ತಿದ್ದಾರೆ ಹಾಗೂ ತಂಡದ ಉಳಿದ ಆಟಗಾರರಿಗೆ 6 ಲಕ್ಷ ದಂಡ ವಿಧಿಸಲಾಗಿದೆ ಈ ಎಲ್ಲ ಕಾರಣಗಳು ಅವರನ್ನು ಬ್ಯಾನ್ ಸಂಕಷ್ಟಕ್ಕೆ ತಂದಿಟ್ಟಿವೆ. ಇದನ್ನೂ ಓದಿ: ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?
ಎಂಐಗೆ ಒಂದು ಪಂದ್ಯ ನಿಷೇಧ?: ಮುಂಬೈ ಇಂಡಿಯನ್ಸ್ ಈಗಾಗಲೇ 2 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದು, ಮುಂದಿನ ಪಂದ್ಯದಲ್ಲೂ ಇದೇ ರೀತಿ ನಿಧಾನಗತಿಯ ಬೌಲಿಂಗ್ ಮಾಡಿಸಿದರೆ ರೋಹಿತ್ ಶರ್ಮಾ ಐಪಿಎಲ್ ನಿಯಮದ ಪ್ರಕಾರ 30 ಲಕ್ಷ ರೂ. ದಂಡ ತೆರುವ ಜೊತೆಗೆ, ಮುಂದಿನ ಒಂದು ಪಂದ್ಯದಲ್ಲಿ ನಿಷೇಧಕ್ಕೆ ಒಳಗಾಗಲಿದ್ದಾರೆ ಎಂದು ಐಪಿಎಲ್ ಮಂಡಳಿ ಎಚ್ಚರಿಕೆ ನೀಡಿದೆ.
ದಂಡ ವಿಧಿಸುವುದು ಏಕೆ?: ಐಪಿಎಲ್ ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. ಐಪಿಎಲ್ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: 3 ವಿಕೆಟ್ ಕಿತ್ತು ರೋಚಕ ತಿರುವು – ತಾಯಿಯ ಬಗ್ಗೆ ರಶೀದ್ ಖಾನ್ ಭಾವನಾತ್ಮಕ ಮಾತು
ಏನಿದು ಸ್ಟ್ರೆಟಜಿಕ್ ಟೈಮ್‌ಔಟ್?: ಪ್ರತಿ ಪಂದ್ಯದಲ್ಲಿ 3 ನಿಮಿಷದ 4 ಸ್ಟ್ರೆಟಜಿಕ್ ಟೈಮ್ ಔಟ್ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್ ಬೌಲಿಂಗ್ ತಂಡ 6-9 ಓವರ್ ಮಧ್ಯೆ, 2ನೇ ಸ್ಟ್ರೆಟಜಿಕ್ ಟೈಮ್ ಔಟ್ ಅನ್ನು ಬ್ಯಾಟಿಂಗ್ ತಂಡ 13-16 ಓವರ್ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.
ದಂಡ ಯಾಕೆ?: ಐಪಿಎಲ್ ಅಂದ್ರೆ ಬಿಸಿನೆಸ್. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್ ಬಹಳ ಮುಖ್ಯ. ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್ ಮಾಡಿದರೆ ಅದು ಐಪಿಎಲ್ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.