‘ಹಿಟ್ಲರ್ ಕಲ್ಯಾಣ’ ನಟಿ ಪದ್ಮಿನಿ ದೇವನಹಳ್ಳಿ (Padmini Devanahalli) ಹಾಗೂ ‘ಲಕ್ಷ್ಮಿ ನಿವಾಸ’ ಸೀರಿಯಲ್ ನಟ ಅಜಯ್ ರಾಜ್ ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ಏ.15ರಂದು ಗಂಡು ಮಗುವಿಗೆ (Baby Boy) ಪದ್ಮಿನಿ ಜನ್ಮ ನೀಡಿದ್ದಾರೆ.
View this post on Instagram
ಪತ್ನಿಯ ಪ್ರೆಗ್ನೆನ್ಸಿ ಫೋಟೋಶೂಟ್ ಶೇರ್ ಮಾಡಿ, ಮನೆಗೆ ಹೊಸ ಅತಿಥಿ ಆಗಮನವಾಗಿರುವ ಬಗ್ಗೆ ಅಜಯ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ತಂದೆಯಾಗಿರುವ ಖುಷಿಯಲ್ಲಿದ್ದಾರೆ ಅಜಯ್ ರಾಜ್. ಈ ದಂಪತಿಗೆ ಇದೀಗ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ಅಭಿನಯದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೂಟಿಂಗ್ ಶುರು – BRB ಫಸ್ಟ್ ಲುಕ್ ರಿವೀಲ್
View this post on Instagram
ಅಂದಹಾಗೆ, ಮಹಾದೇವಿ, ಹಿಟ್ಲರ್ ಕಲ್ಯಾಣ ಖ್ಯಾತಿಯ ಪದ್ಮಿನಿ ಅವರು ಅಜಯ್ ರಾಜ್ ಜೊತೆ 4 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ:ಮೈಸೂರು | ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ ನಟ ಪ್ರಭುದೇವ
ಅಜಯ್ ರಾಜ್ (Ajay Raj) ಅವರು ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಮುಂದಿನ ನಿಲ್ದಾಣ, ಹಳ್ಳಿ ಮೇಷ್ಟ್ರು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಕ್ತ, ಲಕ್ಷ್ಮಿ ನಿವಾಸ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.