– ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ
ಯಾದಗಿರಿ: ಹುಡುಗಿಯರನ್ನು ನಿಭಾಯಿಸಲು ಮತ್ತು ಶೋಕಿಗಾಗಿ ಐಷಾರಾಮಿ ಬೈಕ್‌ಗಳನ್ನು ಕಳ್ಳತನ (Theft) ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಬೈಕ್ (Bike) ಕಳ್ಳರನ್ನು ಯಾದಗಿರಿ (Yadgiri) ಪೊಲೀಸರು ಬಂಧಿಸಿದ್ದಾರೆ.
Advertisement
ಜಿಲ್ಲೆಯಲ್ಲಿ ಇತ್ತೀಚಿಗೆ ಬೈಕ್ ಕಳ್ಳತನಗಳು ಹೆಚ್ಚಾಗಿ ನಡೆಯುತ್ತಿವೆ. ಯಾದಗಿರಿ, ಶಹಾಪುರ ನಗರ ಸೇರಿದಂತೆ ಜಿಲ್ಲೆಯ ನಾನಾ ಭಾಗದಲ್ಲಿ ಸಾಕಷ್ಟು ಬೈಕ್ ಕಳ್ಳತನವಾಗಿರುವ ವರದಿಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೆಂಭಾವಿ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಕೆಂಭಾವಿ ಠಾಣೆಯ ಪಿಎಸ್‌ಐ ಕೆಂಭಾವಿ ಪಟ್ಟಣದಲ್ಲಿ ಗಸ್ತು ನಡೆಸುತ್ತಿದ್ದರು. ಇದೇ ವೇಳೆ ಪಟ್ಟಣದಲ್ಲಿ ಇಬ್ಬರು ಯವಕರು ಬೈಕ್ ಜೊತೆ ಅನುಮಾನಸ್ಪದ ರೀತಿಯಲ್ಲಿ ಕಂಡಿದ್ದಾರೆ. ಕೂಡಲೇ ಅವರಿಬ್ಬರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: 80 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್ – 27 ಮಂದಿ ದಾರುಣ ಸಾವು, 17 ಮಂದಿಗೆ ಗಾಯ
Advertisement
Advertisement
ವಶಕ್ಕೆ ಪಡೆದ ಇಬ್ಬರನ್ನು ವಿಚಾರಣೆ ನಡೆಸಿದಾಗ, ಒಬ್ಬ ಹುಣಸಗಿ (Hunasagi) ತಾಲೂಕಿನ ಕನಗಂಡನಹಳ್ಳಿ ತಾಂಡ ನಿವಾಸಿ ದೇವರಾಜ್ ಹಾಗೂ ಇನ್ನೋರ್ವ ಸುರಪುರ (Surapura) ತಾಲೂಕಿನ ಪೀರಾ ನಾಯಕ ತಾಂಡದ ಯುವಕ ಶಶಿಕುಮಾರ್ ಎಂದು ತಿಳಿದುಬಂದಿದೆ. ಇಬ್ಬರನ್ನು ಬೈಕ್ ಸಮೇತ ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಒಂದಲ್ಲ, ಎರಡಲ್ಲ ಸುಮಾರು 20 ಬೈಕ್‌ಗಳನ್ನು ಕದ್ದು ಮಾರಾಟ ಮಾಡಲು ಪ್ಲಾನ್ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಇಬ್ಬರು ಬಲಿ- ತಗ್ಗು ಪ್ರದೇಶಗಳಲ್ಲಿ ಕೃತಕ ಪ್ರವಾಹ ಸೃಷ್ಟಿ
Advertisement
ಈ ಇಬ್ಬರು ಯುವಕರು ಓದು ಅರ್ಧಕ್ಕೆ ಬಿಟ್ಟು ಶೋಕಿ ಜೀವನ ನಡೆಸಲು ಮುಂದಾಗಿದ್ದರು. ಇಬ್ಬರೂ ಜೇಬಲ್ಲಿ ಕಾಸು ಇರೋ ತನಕ ಶೋಕಿ ಜೀವನ ನಡೆಸುತ್ತಿದ್ದರು. ಇಷ್ಟು ಸಾಲದ್ದಕ್ಕೆ ಇಬ್ಬರಿಗೂ ಗರ್ಲ್‌ಫ್ರೆಂಡ್ಸ್ ಇದ್ದಾರೆ ಎಂದು ತಿಳಿದು ಬಂದಿದೆ. ಜೇಬಲ್ಲಿ ಕಾಸು ಖಾಲಿಯಾಗುತ್ತಿದ್ದ ಹಾಗೆ ಹುಡುಗಿಯರನ್ನು ನಿಭಾಯಿಸಲು ಕಳ್ಳತನದ ಹಾದಿಯನ್ನ ಹಿಡಿದಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಜನ ಜಂಗುಳಿ ಇರುವಂತಹ ಪ್ರದೇಶದಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಡುಪ್ಲಿಕೇಟ್ ಕೀ ಬಳಸಿ ಕಳ್ಳತನ ಮಾಡುತ್ತಿದ್ದರು. ಇದನ್ನೂ ಓದಿ: ಪತ್ನಿಯನ್ನು ನಿಂದನೆ ಮಾಡಿದಕ್ಕೆ ರಾಡ್‍ನಿಂದ ಹಲ್ಲೆ ನಡೆಸಿ ತಮ್ಮನ ಕೊಲೆ
ಇವರಿಬ್ಬರು ಸೇರಿಕೊಂಡು ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ನಾನಾ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20 ಬೈಕ್‌ಗಳು ಹಾಗೂ ಒಂದು ಕಾರು ಸಹ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಇವರಿಬ್ಬರೂ ಸಾಮಾನ್ಯ ಬೈಕ್‌ಗಳನ್ನು ಕದಿಯುತ್ತಿರಲಿಲ್ಲ. ಬದಲಿಗೆ ಐಷಾರಾಮಿ ಬೈಕ್‌ಗಳು, ಹೆಚ್ಚಿನ ಬೆಲೆಯ ಬೈಕ್‌ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ವಿಶೇಷವಾಗಿ ರಾಯಲ್ ಎನ್‌ಫೀಲ್ಡ್ (Royal Enfield), ಡ್ಯೂಕ್ (Duke) ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಪ್ರತಿಯೊಂದು ಬೈಕ್ ಸುಮಾರು 1 ರಿಂದ 2 ಲಕ್ಷ ರೂ. ಬೆಲೆ ಬಾಳುವಂತಹ ಬೈಕ್‌ಗಳೇ ಆಗಿದ್ದವು. ಇದನ್ನೂ ಓದಿ: ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ
ಕಳೆದ ಒಂದು ವರ್ಷದಿಂದ ಈ ಇಬ್ಬರು ಮೋಜು, ಮಸ್ತಿ ಹಾಗೂ ಹುಡುಗಿಯರನ್ನು ನಿಭಾಯಿಸುವ ಉದ್ದೇಶದಿಂದ ಬೈಕ್‌ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಬೈಕ್‌ಗಳ ಜೊತೆಗೆ ಸುಮಾರು 4 ಲಕ್ಷ ರೂ. ಮೌಲ್ಯದ ಮಾರುತಿ ಜೆನ್ (Maruti Zen) ಕಾರು ಕೂಡ ಕಳ್ಳತನ ಮಾಡಿದ್ದಾರೆ. ಎಲ್ಲಾ ಬೈಕ್‌ಗಳು ಹಾಗೂ ಕಾರನ್ನು ಕ್ರಮೇಣವಾಗಿ ಒಂದೊಂದಾಗಿ ಮಾರಾಟ ಮಾಡಲು ಪ್ಲಾನ್ ಮಾಡಿದ್ದರು. ಆದರೆ ಇಂದು ಕಳ್ಳತನ ಮಾಡಿರುವ ಬೈಕ್ ಸಮೇತರಾಗಿಯೇ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾರೆ. ಈ ಇಬ್ಬರು ಕಳ್ಳರಿಂದ 28 ಲಕ್ಷ ರೂ. ಮೌಲ್ಯದ ಬೈಕ್‌ಗಳು ಮತ್ತು ಒಂದು ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಒಟ್ಟಿನಲ್ಲಿ ಶೋಕಿಗಾಗಿ ಕಾಲೇಜಿಗೆ ಹೋಗುವುದನ್ನು ಅರ್ಧಕ್ಕೆ ಬಿಟ್ಟು ಕಳ್ಳತನದ ಹಾದಿ ಹಿಡಿದಿದ್ದ ಯುವಕರು ಇಂದು ಪೊಲೀಸರ ಕೈಗೆ ಸಿಕ್ಕಿ ಜೈಲು ಸೇರಿದ್ದಾರೆ. ಇದನ್ನೂ ಓದಿ: ಪೋರ್ನ್ ಸ್ಟಾರ್‌ನಂತೆ ಡ್ರೆಸ್ ಧರಿಸಲು ಪತ್ನಿಗೆ ಪತಿ ಒತ್ತಾಯ
Web Stories