ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಿಡ್ನಿಯಲ್ಲಿನ ರೆಸ್ಟೋರೆಂಟ್‍ವೊಂದರಲ್ಲಿ ಫ್ಲಾಸ್ ಡ್ಯಾನ್ಸ್ ಕಲಿಯೋ ಪ್ರಯತ್ನ ಮಾಡಿ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ.
2019ರ ಆರಂಭದಲ್ಲಿ ಶತಕ ಬಾರಿಸುವ ಮೂಲಕ ರೊಹಿತ್ ಶರ್ಮಾ ಅತ್ಯುತ್ತಮ ಶುಭಾರಂಭ ಮಾಡಿದ್ದಾರೆ. ಮೊದಲ ಏಕದಿನ ಪಂದ್ಯ ಮುಕ್ತಾಯವಾದ ನಂತರ ರೋಹಿತ್ ಶರ್ಮಾ ಹಾಗೂ ಟೀಂ ಇಂಡಿಯಾದ ಆಟಗಾರರು ರೆಸ್ಟೋರೆಂಟ್‍ಗೆ ತೆರಳಿದ್ದಾರೆ.
ಈ ವೇಳೆ ಆಟಗಾರ ಶಿಖರ್ ಧವನ್ ಅವರ ಪುತ್ರಿ ರೋಹಿತ್ ಶರ್ಮಾಗೆ ಫ್ಲಾಸ್ ಡ್ಯಾನ್ಸ್ ಸ್ಟೆಪ್ಸ್ ಹೇಳಿಕೊಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ ಟ್ಟಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದೆ. ಹಿಟ್ ಮ್ಯಾನ್ ಫ್ಲಾಸ್ ಡ್ಯಾನ್ಸ್ ಕಲಿಯುತ್ತಿದ್ದರೆ ಹೀಗಿರುತ್ತದೆ ಅಂತ ಬರೆದು ಪೋಸ್ಟ್ ಮಾಡಿದೆ.
Hitman learning the floss dance be like ????????#TeamIndia pic.twitter.com/37lGysldJC
— BCCI (@BCCI) January 13, 2019
ವಿಡಿಯೋದಲ್ಲಿ ರೋಹಿತ್ ಬಾಲಕಿಯ ಫ್ಲಾಸ್ ಡ್ಯಾನ್ಸ್ ನೋಡಿ ಸ್ಟೆಪ್ಸ್ ಅರ್ಥವಾಗದಿದ್ದರೂ ಸ್ಟೆಪ್ಸ್ ಹಾಕಲು ಪ್ರಯತ್ನಿಸಿದ್ದಾರೆ. ಬಳಿಕ ರೋಹಿತ್ ಜೊತೆ ಕೇದಾರ್ ಜಾಧಾವ್ ಕೂಡ ಹೆಜ್ಜೆ ಹಾಕಲು ಪ್ರಯತ್ನಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 34 ರನ್ ಗಳಿಂದ ಗೆದ್ದುಕೊಂಡಿದ್ದು, ಎರಡನೇ ಪಂದ್ಯ ಜನವರಿ 15 ರಂದು ಅಡಿಲೇಡ್ ನಲ್ಲಿ ನಡೆಯಲಿದ್ದರೆ, ಕೊನೆಯ ಪಂದ್ಯ ಜನವರಿ 18 ರಂದು ಮೆಲ್ಬರ್ನ್ ನಲ್ಲಿ ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv