Bengaluru CityCrimeDistrictsKarnatakaLatest

ಯೂಟರ್ನ್ ವೇಳೆ ಹಿಟ್ ಆ್ಯಂಡ್ ರನ್ – ಬೈಕಿಗೆ ಡಿಕ್ಕಿ ಹೊಡೆದು ಕಾರ್ ಎಸ್ಕೇಪ್..!

ಬೆಂಗಳೂರು: ನಗರದಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಕುಮಾರಸ್ವಾಮಿ ಲೇಔಟ್‍ನ ಸಾರಕ್ಕಿ ಸಿಗ್ನಲ್‍ನಲ್ಲಿ ರಾತ್ರಿ ವೇಳೆ ನಡೆದಿದೆ.

ಡಿಸೆಂಬರ್ 16ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿನಾಂಕ 16 ರಾತ್ರಿ ಸುಮಾರು 11 ಗಂಟೆಗೆ ಮಲ್ಲೇಶ್ ಎಂಬವರು ಕೆಲಸ ಮುಗಿಸಿ ಬೈಕಿನಲ್ಲಿ ಮನೆ ಕಡೆ ಹೊರಟಿದ್ದರು. ಸಾರಕ್ಕಿ ಸಿಗ್ನಲ್‍ನ ಮಾರ್ಕೆಟ್ ಬಳಿ ಯೂ ಟರ್ನ್ ತೆಗೆದುಕೊಳ್ಳೋಕೆ ಮುಂದಾಗಿದ್ದರು. ಈ ವೇಳೆ ಅತಿವೇಗವಾಗಿ ಬಂದ ಕಾರೊಂದು ಮಲ್ಲೇಶ್ ಬೈಕಿಗೆ ಡಿಕ್ಕಿ ಹೊಡೆದಿದೆ.

ಕಾರಿನ ಡಿಕ್ಕಿಯ ರಭಸಕ್ಕೆ ಮಲ್ಲೇಶ್ ಹೋಗುತ್ತಿದ್ದ ಬೈಕ್ ಸುಮಾರು 20 ಅಡಿಗೂ ದೂರಕ್ಕೆ ಬಿದ್ದಿತ್ತು. ಈ ಭಯಾನಕ ಅಪಘಾತ ನೋಡಿದ ಅಕ್ಕಪಕ್ಕದಲ್ಲಿದ್ದ ಜನರಿಗೆ ಏನಾಯ್ತು, ಅಂತ ಗೊತ್ತಾಗೋ ಮುನ್ನವೇ ಕಾರು ಅದೇ ವೇಗದಲ್ಲಿ ಎಸ್ಕೇಪ್ ಆಗಿದೆ.

ಹೆಲ್ಮೆಟ್ ಹಾಕದೇ ರೈಡ್ ಮಾಡುತ್ತಿದ್ದ ನಮ್ಮ ತಂದೆಯ ತಲೆ ಮತ್ತು ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಮಲ್ಲೇಶ್ ಮಗ ಮಂಜುನಾಥ್ ಹೇಳಿದ್ದಾರೆ.

ಸದ್ಯಕ್ಕೆ ಈ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು, ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button