ಬೆಂಗಳೂರು: ಕಂಟೇನರ್ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಡಿವಾಳ ಸಮೀಪದ ಮೈಕೋಬಂಡೆ ಬಳಿ ನಡೆದಿದೆ.
ಕಂಟೇನರ್ ಲಾರಿ ಚಾಲಕ ಬೈಕ್‌ಗೆ ಡಿಕ್ಕಿ (Bike Accident) ಹೊಡೆದು ಎಸ್ಕೇಪ್ ಆಗಿದ್ದಾನೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಗಾಯಗೊಂಡ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಮೃತನ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ. ಆಡುಗೋಡಿ ಸಂಚಾರ ಪೊಲೀಸ್(Adugodi Traffic Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಪತ್ತೆಗಾಗಿ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ – ಕಾಂಗ್ರೆಸ್‍ನಿಂದ 5ನೇ ಗ್ಯಾರಂಟಿ ಘೋಷಣೆ
ಈ ಹಿಂದೆಯೂ ಮೇಡಹಳ್ಳಿ ಫ್ಲೈ ಓವರ್ ಬಳಿ ಕಾರೊಂದು ಎದುರು ಬಂದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಬಳಿಕ ತನಿಖೆ ನಡೆಸಿದ್ದ ಕೆ.ಆರ್.ಪುರಂ ಸಂಚಾರ ಪೊಲೀಸರು ಟೆಕ್ಕಿಯನ್ನು ಬಂಧಿಸಿದ್ದರು. ಇದನ್ನೂ ಓದಿ: 4 ರನ್‌ಗಳಿಗೆ 3 ವಿಕೆಟ್ ಪತನ – ಚೆನ್ನೈಗೆ ಸೋಲು, ಮೊದಲ ಸ್ಥಾನಕ್ಕೆ ರಾಜಸ್ಥಾನ ಜಿಗಿತ