– ರಕ್ತಚಂದನ ಕಳವು ಮಾಡೋಕೆ ಟಿಟಿ ಕಳ್ಳತನ ಮಾಡಿದ್ದ ಸ್ಮಗ್ಲರ್ ಅಂದರ್
ಚಿಕ್ಕಬಳ್ಳಾಪುರ: ಶಾಲೆಯಿಂದ ಮಗುವನ್ನು ಕರೆದುಕೊಂಡುಬರಲು ಮತ್ತೊಬ್ಬ ಮಗುವಿನೊಂದಿಗೆ ಹೊರಟಿದ್ದ ಮಹಿಳೆ ರಸ್ತೆ ಬದಿ ನಿಂತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ನಗರದ ನಂದಿ ಮೋರಿ ಬಳಿ ಸಂಭವಿಸಿದೆ. ಚಾಲಕ ಕಾರಿನ ಸಮೇತ ಎಸ್ಕೇಪ್ ಆಗಿದ್ದಾನೆ.
ಘಟನೆಯಲ್ಲಿ ತಾಯಿ (25 ವರ್ಷದ ಭಾನುಪ್ರಿಯಾ) ಸಾವನ್ನಪ್ಪಿದ್ದು, 4 ವರ್ಷದ ಮಗು ಮನೋಜ್ ಸ್ಥಿತಿ ಗಂಭೀರವಾಗಿದೆ. ಮಗುವಿನ ತಲೆಗೆ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತಳ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ರಿಪೋರ್ಟ್ ಕೇಳಿದೆ: ಡಾ. ಎಂ.ಸಿ.ಸುಧಾಕರ್
Advertisement
Advertisement
ಸ್ಮಗ್ಲರ್ ಅಂದರ್:
ಮತ್ತೊಂದು ಪ್ರಕರಣದಲ್ಲಿ ರಕ್ತಚಂದನ ಕಳ್ಳತನ ಮಾಡೋಕೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಟಿಟಿ ವಾಹನ ಕಳವು ಮಾಡಿದ್ದ ಖತರ್ನಾಕ್ ಕಳ್ಳನನ್ನ ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆಂಧ್ರ ಮೂಲದ ಫ್ರಕ್ಕುದೀನ್ ಆಲಿಯಾಸ್ ತಿರುಪತಿ ಫಕ್ರುದ್ದೀನ್ ಬಂಧಿತ ಕಳ್ಳ. ಇದನ್ನೂ ಓದಿ: ಪವರ್ ಶೇರಿಂಗ್: ಡಿಕೆಶಿ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸ್ಪಷ್ಟನೆ
Advertisement
Advertisement
ಅಂದಹಾಗೆ ಈತ ವೃತ್ತಿಯಲ್ಲಿ ರಕ್ತಚಂದನದ ಸ್ಮಗ್ಲರ್ ಆಗಿದ್ದು, ಈತನ ಮೇಲೆ ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ 77ಕ್ಕೂ ಹೆಚ್ಚು ಪ್ರಕರಣಗಳಿವೆ. ಈತ ಚಿಕ್ಕಬಳ್ಳಾಪುರದಲ್ಲಿ ಮೇ 1 ರಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಮಂಜುನಾಥ್ ಎಂಬುವವರಿಗೆ ಸೇರಿದ್ದ ಟಿಟಿ ವಾಹನ ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈತನನ್ನ ರಕ್ತಚಂದನ ಕಳವು ಪ್ರಕರಣದಲ್ಲಿ ಆಂಧ್ರ ಪೊಲೀಸರು ಬಂಧಿಸಿ, ಟಿಟಿ ವಾಹನ ವಶಕ್ಕೆ ಪಡೆದುಕೊಂಡಿದ್ರು. ಈಗ ಆಂಧ್ರ ಪೊಲೀಸರ ಮಾಹಿತಿ ಮೇರೆಗೆ ಕಳ್ಳನನ್ನ ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದು ಆತ ಕಳವು ಮಾಡಿದ್ದ ಟಿಟಿ ಜಾಗದಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಇದನ್ನೂ ಓದಿ: 7.99 ಲಕ್ಷಕ್ಕೆ ಅತ್ಯಾಕರ್ಷಕ ಹೊಸ ಅಮೇಜ್ ಕಾರು ಬಿಡುಗಡೆ