ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿ..!

Public TV
2 Min Read
MAN ARREST

ತಿರುನಲ್ವೇಲಿ (ತಮಿಳುನಾಡು): `ಬಂಡೆಯಿಂದ ಬಂಡೆಗೆ ಹಾರುವ ಕಲೆ ಕರಗತ ಮಾಡಿಕೊಂಡಿದ್ದ ಆರೋಪಿಯೊಬ್ಬ ಹಲವು ದಿನಗಳಿಂದ ತೆನ್ಕಾಶಿಯ ಚಿನ್ನಪೋತಿ ಎಂಬ ಚಿಕ್ಕಗುಡ್ಡದಲ್ಲಿ ತಲೆ ಮರೆಸಿಕೊಂಡಿದ್ದ. ಪೊಲೀಸರು ಸಹ ಒಂದು ಹಂತದವರೆಗೆ ಅವನ ಕಾರ್ಯತಂತ್ರವನ್ನೆಲ್ಲ ವೀಕ್ಷಿಸಲು ಎರಡು ಡ್ರೋಣ್ ಕ್ಯಾಮೆರಾವನ್ನು ನಿಯೋಜಿಸಿದ್ದರು. ಸಮಯ ನೋಡಿ ಕಾದುಕುಳಿತಿದ್ದ ಪೊಲೀಸರು ಸಮೀಪದಲ್ಲೇ ಇದ್ದ ಹೊಂಡದಲ್ಲಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

ಹೌದು. ಹಲವು ದಿನಗಳಿಂದ ಗುಡ್ಡದಲ್ಲೇ ತಲೆ ಮರೆಸಿಕೊಂಡಿದ್ದ ಆರೋಪಿ ಶಾಹುಲ್ ಹಮೀದ್ ಅಲಿಯಾಸ್ ಲೆಫ್ಟ್ ಸಾಹುಲ್ (32) ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನ ತಿರನ್ವೇಲಿಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

DRONE 1

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಮೊದಲಿಗೆ ಆಯುಧಗಳನ್ನು ಒಪ್ಪಿಸಿ ಶರಣಾಗುವಂತೆ ತಿಳಿಸಿದರು. ಪೊಲೀಸರು ಸುತ್ತುವರಿದಿದ್ದರಿಂದ ಅತನಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ಇದಕ್ಕೂ ಮುನ್ನ ಡ್ರೋಣ್ ಮೂಲಕ ವೀಕ್ಷಿಸಿದಾಗ ಶಾಹುಲ್ ಕೊಳದ ಮೇಲ್ಮೈಗೆ ಬರುತ್ತಿರುವುದನ್ನು ತೋರಿಸಿತು. ಎತ್ತರದ ಗಿಡಗಂಟಿಗಳೂ ಅಲ್ಲಿ ಬೆಳೆದಿದ್ದರಿಂದ ಪೊಲೀಸರೇ ಹೊಂಡಕ್ಕಿಳಿದು ಆರೋಪಿಯನ್ನು ಕರೆತರುವಲ್ಲಿ ಯಶಸ್ವಿಯಾದರು.

man 1

ಏನಿದು ಘಟನೆ? 
ಇದೇ ಮಾರ್ಚ್ 10ರಂದು 50 ವರ್ಷದ ಕುರುಬ ಪೀರ್ ಮೊಹಮ್ಮದ್ ಎಂಬವರ ಮೇಲೆ ಶಾಹುಲ್ ಹಲ್ಲೆ ನಡೆಸಿ ತೆನ್ಕಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಗಂಭಿರ ಗಾಯಗೊಂಡಿದ್ದರಿಂದ ಆತನನನ್ನು ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ತಪ್ಪಿಸಿಕೊಂಡು ಗುಡ್ಡದಲ್ಲಿ ಅಡಗಿಕೊಂಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

arrested new

ಕಾಡಿನ ಮಾರ್ಗ ನಿರ್ಬಂಧಿಸಿದ್ದರಿಂದ ಶಾಹುಲ್ ಹೊಂಡದಲ್ಲಿ ಸ್ನಾನಕ್ಕೆ ಬರುವ ಮಹಿಳೆಯರಿಗೂ ಬೆದರಿಕೆಯೊಡಿದ್ದನು ಎನ್ನಲಾಗಿದೆ. ಇಲ್ಲಿನ ಗುಡ್ಡ ನೀರು ಹಾಗೂ ದೊಡ್ಡದೊಡ್ಡ ಗಿಡಗಂಟಿಗಳು ಬೆಳೆದಿದ್ದರಿಂದ ಆರೋಪಿಯನ್ನು ಬಂಧಿಸುವುದು ಸಾಹಸವೇ ಆಗಿತ್ತು. ಬಂಡೆಯಿಂದ ಹಾದುಹೋಗಿ ಹಿಡಿಯಲು ಮುಂದಾದಾಗ ಆತ ಮತ್ತೊಂದು ಬಂಡೆ ಮಾರ್ಗವಾಗಿ ನುಸುಳುತ್ತಿದ್ದನು. ನಂತರ ಇನ್ಸ್‍ಪೆಕ್ಟರ್ ಬಾಲಮುರುಗನ್ ನೇತೃತ್ವದ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು, ಅವರು ಮಾರ್ಚ್ 15 ರಂದು ಡ್ರೋನ್‍ಗಳನ್ನು ಬಳಸಲು ನಿರ್ಧರಿಸಿದರು.

Police Jeep

ವ್ಯಾಪಕ ಶೋಧಕಾರ್ಯದ ನಂತರ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಐಪಿಸಿ ಸೆಕ್ಷನ್ 341 (ತಪ್ಪು ಸಂಯಮಕ್ಕೆ ಶಿಕ್ಷೆ), 294 (ಬಿ) (ಅಶ್ಲೀಲ ಕೃತ್ಯಗಳು ಮತ್ತು ಗೀತೆ), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯವನ್ನುಂಟು ಮಾಡಿದಾಗ), 506 (2) (ಅಪರಾಧಕ್ಕೆ ಬೆದರಿಕೆಯೊಡ್ಡಿದಾಗ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ತೆನ್ಕಾಶಿ ಪೊಲೀಸ್ ವರಿಷ್ಠಾದಿಕಾರಿ ಆರ್.ಕೃಷ್ಣ ಅವರು ಪೊಲೀಸರ ಕಾರ್ಯಾಚರಣೆಗೆ ಟ್ವೀಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *