ಭಾರತದಾದ್ಯಂತ ಗೌರಿ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವರು ಮನೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಮೂರು ದಿನ ಪೂಜೆ ಮಾಡುತ್ತಾರೆ. ಇನ್ನು ಯುವಕರ ಗುಂಪು ತಮ್ಮ ತಮ್ಮ ಏರಿಯಾದಲ್ಲಿ ದೊಡ್ಡದಾಗಿ ಪ್ರತಿಷ್ಠಾಪನೆ ಮಾಡಿ ಇಡೀ ಗ್ರಾಮವನ್ನೇ ಸಂಭ್ರಮಿಸುವಂತೆ ಮಾಡುತ್ತಾರೆ.
ಯಾವುದೇ ಕಾರ್ಯಕ್ರಮವಾಗಲಿ, ಮದುವೆ, ಜಾತ್ರೆ, ಗೃಹಪ್ರವೇಶ ಇನ್ನು ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುವ ಮೊದಲು ಗಣಪನನ್ನು ಆರಾಧಿಸುತ್ತಾರೆ. ಯಾಕೆಂದರೆ ಗಣಪನನ್ನು ವಿಘ್ನ ನಿವಾರಕ ಎಂದು ಕರೆಯುತ್ತಾರೆ. ಆದ್ದರಿಂದ ತಾವು ಮಾಡುವ ಕಾರ್ಯಕ್ಕೆ ಯಾವುದೇ ವಿಘ್ನ ಬರಬಾದರು ಎಂದು ಗಣಪನನ್ನು ಪೂಜಿಸುತ್ತಾರೆ. ಗಣೇಶನಿಗೆ ನಾನು ಹೆಸರುಗಳಿವೆ, ಗಣಪ, ಏಕದಂತ, ವಿಘ್ನೇಶ, ಗೌರಿತನಯ, ವಿನಾಯಕ, ಗಜಮುಖ ಸೇರಿದಂತೆ ಅನೇಕ ಹೆಸರುಗಳಿಂದ ಕರೆಯುತ್ತಾರೆ.
Advertisement
Advertisement
ಗಜಮುಖನಾಗಿದ್ದು ಹೇಗೆ?
ಒಮ್ಮೆ ಕೈಲಾಸದಲ್ಲಿ ಪಾರ್ವತಿ ಒಬ್ಬಳೆ ಇದ್ದು, ಒಂಟಿತನವನ್ನು ಅನುಭವಿಸುತ್ತಿದ್ದಳು. ಆಗ ಆಕೆ ತನ್ನ ಮೈಕೊಳೆಯಿಂದ ಒಬ್ಬ ಬಾಲಕನ ಆಕಾರದಲ್ಲಿ ಒಂದು ಬೊಂಬೆಯನ್ನು ಮಾಡುತ್ತಾಳೆ. ಬಳಿಕ ಆ ಬೊಂಬೆಗೆ ಜೀವ ತುಂಬುತ್ತಾಳೆ. ಆಗ ಹುಟ್ಟುವ ಬಾಲಕನೇ ಗಣೇಶ. ಒಂದು ದಿನ ಪಾರ್ವತಿ ಸ್ನಾನದ ಗೃಹಕ್ಕೆ ಹೋಗುವ ಮೊದಲು ಗಣೇಶನನ್ನು ಬಾಗಿಲು ಕಾಯುವಂತೆ ಸೂಚಿಸಿ ಹೋಗುತ್ತಾಳೆ. ಈ ಸಂದರ್ಭದಲ್ಲಿ ಶಿವ ಕೈಲಾಸಕ್ಕೆ ಬರುತ್ತಾನೆ.
Advertisement
ಶಿವ ಸ್ನಾನದ ಗೃಹದ ಒಳಗೆ ಹೋಗಲು ಯತ್ನಿಸುತ್ತಾನೆ. ಆದರೆ ಗಣೇಶ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇದರಿಂದ ಕೋಪಗೊಂಡ ಶಿವ ಗಣೇಶನ ರುಂಡವನ್ನು ಕತ್ತರಿಸುತ್ತಾನೆ. ಈ ವೇಳೆ ಸ್ನಾನದ ಗೃಹದಿಂದ ಹೊರ ಬಂದು ತನ್ನ ಮಗನ ಸ್ಥಿತಿಯನ್ನು ಕಂಡು ಕೋಪಗೊಂಡು ಮಹಾಕಾಳಿಯ ರೂಪತಾಳಿ ಪ್ರಕೃತಿಯನ್ನೇ ನಾಶ ಮಾಡಲು ಮುಂದಾಗುತ್ತಾಳೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ
Advertisement
ಈ ವೇಳೆ ತಾಯಿ ಪಾರ್ವತಿ ದೇವಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಏನು ಪ್ರಯೋಜನವಾಗುವುದಿಲ್ಲ. ಆಗ ತನ್ನ ಮಗನಿಗೆ ಜೀವಕೊಡುವಂತೆ ಪಾರ್ವತಿ ಹೇಳುತ್ತಾಳೆ. ಈ ವೇಳೆ ಶಿವ ಕತ್ತರಿಸಿದ ಗಣೇಶನ ರುಂಡ ಸಿಗುವುದಿಲ್ಲ. ಕೊನೆಗೆ ಉತ್ತರ ದಿಕ್ಕಿಗೆ ಯಾರು ತಲೆ ಇಟ್ಟು ಮಲಗಿರುತ್ತಾರೋ ಅವರ ತಲೆ ತಂದು ಜೋಡಿಸಿದರೆ ಜೀವ ಬರುತ್ತದೆ ಎಂದು ಹೇಳುತ್ತಾನೆ.
ಶಿವನ ಆಜ್ಞೆಯಂತೆ ಗಣಗಳು ಉತ್ತರ ದಿಕ್ಕಿಗೆ ಹುಡಿಕಿಕೊಂಡು ಹೋಗುತ್ತಾರೆ. ಕೊನೆಗೆ ಒಂದು ಕಾಡಿನಲ್ಲಿ ಆನೆ ಮರಿಯೊಂದು ಮಲಗಿರುವುದು ಕಾಣಿಸುತ್ತದೆ. ಆಗ ಶಿವನ ಗಣಗಳು ಅದರ ತಲೆಯನ್ನು ಕತ್ತರಿಸಿ ತಂದು ಗಣೇಶನ ದೇಹಕ್ಕೆ ಜೋಡಿಸುತ್ತಾರೆ. ಅಂದಿನಿಂದ ಗಣಪತಿ `ಗಜಮುಖ’ನಾಗುತ್ತಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
#ಗಣೇಶ ಚತುರ್ಥಿ ಸುದ್ದಿಗಳು
* ಗಣಪನಿಗಾಗಿ ಸ್ಪೆಷಲ್ ಮೋದಕ ಮಾಡುವ ವಿಧಾನ
*ಹಬ್ಬಕ್ಕಾಗಿ ಸಿಹಿಯಾದ ಬೆಸಾನ್ ಲಾಡು ಮಾಡುವ ವಿಧಾನ