ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಳಿ ಖಾಸಗಿ ಬಸ್ ವಿಸಿ ನಾಲೆಗೆ ಉರುಳಿದ ಪರಿಣಾಮ ಮೂವರು ಮಕ್ಕಳು ಸೇರಿ 30ಕ್ಕೂ ಜನರು ಮೃತಪಟ್ಟಿದ್ದಾರೆ.
1974ರಲ್ಲಿ ದುದ್ದ ಸಮೀಪ ವಿ.ಸಿ ನಾಲೆಗೆ ಬಸ್ ಬಿದ್ದಿತ್ತು. ಚಾಮುಂಡಿ ಎಕ್ಸ್ ಪ್ರೆಸ್ ಬಸ್ ನಾಲೆಗೆ ಬಿದ್ದು 120 ಮಂದಿ ಜಲಸಮಾಧಿ ಆಗಿದ್ದರು. ಹಾರಕನಹಳ್ಳಿ ಎಂಬಲ್ಲಿ ಜಾತ್ರೆಗೆ ಬಂದಿದ್ದ ಜನರು ಬಸ್ ಹತ್ತಿದ್ದರು. ಆ ಬಸ್ ಜಕ್ಕನಹಳ್ಳಿ ಮೂಲಕ ಮಂಡ್ಯಕ್ಕೆ ಹೋಗುತ್ತಿದ್ದರು. ಆಗ ದುದ್ದ ಸಮೀಪ ನಾಲೆಗೆ ಉರುಳಿತ್ತು. ಒಟ್ಟು 135 ಜನರು ಆ ಬಸ್‍ನಲ್ಲಿದ್ದು, ಚಾಲಕ ಕೆಂಪಯ್ಯ ಸೇರಿದಂತೆ 15 ಜನರು ಪಾರಾಗಿದ್ದರು. ಬೆಳಗ್ಗೆ 7.30ಕ್ಕೆ ಬಿದ್ದ ಬಸ್ ಅನ್ನು 1 ದಿನದ ಬಳಿಕ ಮಿಲಿಟರಿ ನೆರವಿನಲ್ಲಿ ಮೇಲೆ ಎತ್ತಲಾಗಿತ್ತು.
ಆ ನಂತರ 2000ರಲ್ಲಿ ಮಳವಳ್ಳಿ ಸಮೀಪದ ಕಲ್ಕುಣಿ ಎಂಬಲ್ಲಿ ಬಸ್ ಕೆರೆಗೆ ಬಿದ್ದಿತ್ತು. ಬಸ್ ಸಂಜೆ 5ರ ವೇಳೆ ದುರಂತ ಸಂಭವಿಸಿದ್ದು, ಆಗ ಬಸ್‍ನಲ್ಲಿ 50ಕ್ಕೂ ಹೆಚ್ಚು ಜನರಿದ್ದು, ಬಸ್ ಸಂಪೂರ್ಣ ಜಲಾವೃತವಾಗಿ 50 ಜನರು ಮೃತಪಟ್ಟಿದ್ದರು. ಅದೃಷ್ಟವಶಾತ್ ಬಹುತೇಕ ಮಂದಿ ಈಜಿ ದಡ ಸೇರಿದ್ದರು. ಆಗ ಕೂಡ ರಾತ್ರಿ ಇಡೀ ಮಿಲಿಟರಿ ನೆರವಿನಲ್ಲಿ ಕಾರ್ಯಚರಣೆ ನಡೆದಿತ್ತು. ಈ ಘಟನೆಯಲ್ಲಿ 8 ಮಂದಿ ಜಲಸಮಾಧಿಯಾಗಿದ್ದರು. ಚಾಲಕ ಸೇರಿದಂತೆ ಹಲವರು ಪಾರಾಗಿದ್ದರು.
ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಳಿ ಖಾಸಗಿ ಬಸ್ 15 ಅಡಿ ಆಳದ ವಿಸಿ ನಾಲೆಗೆ ಉರುಳಿದ ಪರಿಣಾಮ ಮೂವರು ಮಕ್ಕಳು ಸೇರಿ 35್ಕೂ ಜನರು ಸಾವನ್ನಪ್ಪಿದ್ದಾರೆ. ಪಂಚಲಿಗೇಶ್ವರ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಗಿರೀಶ್ ಮತ್ತು ಬಾಲಕ ರೋಹಿತ್ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಬದುಕುಳಿದವರು ಗ್ರಾಮಸ್ಥರಿಗೆ ಮಾಹಿತಿ ತಲುಪಿಸಿದ ಪರಿಣಾಮ ವಿಷಯ ತಿಳಿದ ಗ್ರಾಮಸ್ಥರು ತಮ್ಮ ಹಗ್ಗದ ಸಹಾಯದಿಂದ ರಕ್ಷಣೆಗೆ ಮುಂದಾಗಿದ್ದಾರೆ.
ಗ್ರಾಮಸ್ಥರು ಘಟನಾ ಸ್ಥಳಕ್ಕೆ ತಲುಪುವಷ್ಟರಲ್ಲಿ ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿತ್ತು. ಅಪಘಾತಕ್ಕೊಳಗಾದ ಬಸ್ ಪ್ರತಿನಿತ್ಯ ಎರಡು ಬಾರಿ ಸಂಚರಿಸುತ್ತಿತ್ತು. ಮಂಡ್ಯದಲ್ಲಿ ಈ ರೀತಿಯ ಘಟನೆಗಳು ಪದೇ ಪದೇ ಮರಕಳಿಸುತ್ತಿದ್ದು, ಸರ್ಕಾರದ ರಸ್ತೆ ಅಗಲೀಕರಣ ಮಾಡಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv