ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ, ಮಾಲ್ಡೀವ್ಸ್ (Maldvies) ಉದ್ಧಟತನದ ಹೇಳಿಕೆ ನಂತ್ರ ಎಲ್ಲರ ಚಿತ್ತ ಲಕ್ಷದ್ವೀಪದತ್ತ ಹೊರಳಿದೆ. ಸಾಕಷ್ಟು ಮಂದಿ ಈ ಲಕ್ಷದ್ವೀಪದ ಬಗ್ಗೆ ಗೂಗಲ್ ಮಾಡಿದ್ದಾರೆ. ಹಾಗಿದ್ರೆ ಈ ಲಕ್ಷದ್ವೀಪದ ಇತಿಹಾಸ ಏನು ಎಂಬುದನ್ನು ಸರಳವಾಗಿ ನೋಡೋಣ.
ಲಕ್ಷದ್ವೀಪದ (Lakshadweep) ಇತಿಹಾಸ ಬಲು ರೋಚಕವಾಗಿದೆ. ಮುಸ್ಲಿಂ ಬಾಹುಳ್ಯದ ಈ ದ್ವೀಪ ಸಮೂಹವನ್ನು ವಶಕ್ಕೆ ಪಡೆಯಲು ಪಾಕಿಸ್ತಾನ ಯತ್ನಿಸಿತ್ತು. ಅರ್ಧ ಗಂಟೆ ತಡವಾಗಿದ್ದರೂ ಲಕ್ಷದ್ವೀಪ ನಮ್ಮದಾಗಿರುತ್ತಿರಲಿಲ್ಲ. ಪಾಕಿಸ್ತಾನದ ಈ ಸಂಚನ್ನು ಭಾರತ ವಿಫಲಗೊಳಿಸಿದೆ. ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್ – ಫೋಟೋಗಳು ಸಿಕ್ಕಾಪಟ್ಟೆ ವೈರಲ್!
Advertisement
Advertisement
ಪಾಕ್ ಸಂಚನ್ನು ಭಾರತ ವಿಫಲಗೊಳಿಸಿದ್ದು ಹೇಗೆ..?: 1947ರಲ್ಲಿ ಸ್ವಾತಂತ್ರ್ಯ ನಂತರ ಲಕ್ಷದ್ವೀಪ ಭಾರತದ ಭಾಗವಾಯ್ತು. ಆರಂಭದಲ್ಲಿ ಲಕ್ಷದ್ವೀಪವನ್ನು ನಿರ್ಲಕ್ಷಿಸಲಾಗಿತ್ತು. ಹೀಗಾಗಿ ಲಕ್ಷದ್ವೀಪದ ಮೇಲೆ ಪಾಕಿಸ್ತಾನದ (Pakistan) ಪ್ರಧಾನಿ ಲಿಯಾಖತ್ ಕಣ್ಣು ಹಾಕಿದ್ದ. ಇದೇ ವೇಳೆ ಸರ್ದಾರ್ ವಲ್ಲಭಾಯ್ ಪಟೇಲ್ ಚಿತ್ತವೂ ಹರಿದಿತ್ತು. ಇದನ್ನರಿತ ಪಾಕಿಸ್ತಾನ ಕೂಡಲೇ ಲಕ್ಷದ್ವೀಪದತ್ತ ಯುದ್ಧ ನೌಕೆ ಕಳುಹಿಸಿತ್ತು. ಆದರೆ ಇದಕ್ಕೂ ಮೊದಲೇ ಭಾರತೀಯ ಸೇನೆ ಲಕ್ಷದ್ವೀಪ ತಲುಪಿತ್ತು. ಭಾರತದ ತ್ರಿವರ್ಣ ಪತಾಕೆ ಕಂಡು ಸದ್ದಿಲ್ಲದೇ ಪಾಕ್ ಸೇನೆ ವಾಪಸ್ ಆಗಿತ್ತು. ಆ ಕ್ಷಣದಿಂದಲೂ ಲಕ್ಷದ್ವೀಪ ಭಾರತದ ಭಾಗವಾಗಿದೆ.
Advertisement
Advertisement
ವಿಸ್ತೀರ್ಣ, ಜನಸಂಖ್ಯೆ ಎಷ್ಟು..?: ಭಾರತಕ್ಕೆ ಸೇರಿದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದ ವಿಸ್ತೀರ್ಣ 32.62 ಚದರ ಕಿ.ಮೀ. ಇನ್ನು 36 ಚಿಕ್ಕ ಚಿಕ್ಕ ದ್ವೀಪಗಳ ಸಮೂಹ ಇದೆ. ಇದರಲ್ಲಿ 10 ದ್ವೀಪಗಳಲ್ಲಿ ಮಾತ್ರ ಜನ ವಾಸ ಮಾಡುತ್ತಾರೆ. 2011ರ ಜನಗಣತಿ ಪ್ರಕಾರ, ಇಲ್ಲಿ 64,473 ಮಂದಿ ಇದ್ದಾರೆ. ಇಲ್ಲಿನ ಜನಸಂಖ್ಯೆಯಲ್ಲಿ 96% ಮಂದಿ ಮುಸ್ಲಿಮರು ಇದ್ದಾರೆ. ಸಾಕ್ಷರತೆ ಪ್ರಮಾಣ 91.82% ರಷ್ಟಿದೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್ ಶಾಕ್
ಮೋದಿ ಭೇಟಿ ಬಳಿಕ ಟ್ರೆಂಡ್: ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಲಕ್ಷದ್ವೀಪದ ಪ್ರವಾಸಿ ತಾಣಗಳ ಬಗ್ಗೆ ಹುಡುಕಾಟ ನಡೆದಿದೆ. ಶುಕ್ರವಾರವೊಂದೇ ದಿನ 50ಸಾವಿರಕ್ಕೂ ಹೆಚ್ಚು ಜನ ಲಕ್ಷದ್ವೀಪದ ಬಗ್ಗೆ ಜಾಲಾಡಿದ್ದಾರೆ. ಇದು 20 ವರ್ಷದಲ್ಲೇ ಗರಿಷ್ಠ.. ಮೇಕ್ ಮೈ ಟ್ರಿಪ್‍ನಲ್ಲಿ ಲಕ್ಷದ್ವೀಪಕ್ಕಾಗಿ ಹುಡುಕುವರರ ಪ್ರಮಾಣ 3,400 ಪಟ್ಟು ಜಾಸ್ತಿಯಾಗಿದೆ. ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್ ಟ್ರೆಂಡ್
ಲಕ್ಷದ್ವೀಪದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಯಾವುವು..?:
* ಕವರಟ್ಟಿ ದ್ವೀಪ: ಇದು ಲಕ್ಷದ್ವೀಪದ ರಾಜಧಾನಿಯಾಗಿದ್ದು, ಕವರಟ್ಟಿ ಸಮುದ್ರ ತೀರದಲ್ಲಿ ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳುವುದು ಒಂದು ಸೌಭಾಗ್ಯವೇ ಸರಿ.
* ಮಿನಿಕಾಯ್ ದ್ವೀಪ: ತಿಳಿ ನೀಲಿ ಅಕಾಶ ನೋಡುತ್ತಾ ತಿಳಿಯಂತೆ ಕಾಣುವ ಸಮುದ್ರದಲ್ಲಿ ಬೋಟಿಂಗ್ ಹೋಗಲು ಹೇಳಿ ಮಾಡಿಸಿದ ತಾಣ ಈ ಮಿನಿಕಾಯ್ ದ್ವೀಪವಾಗಿದೆ.
* ಅಮಿನಿ ಬೀಚ್: ಸ್ಕೂಬಾ ಡೈವಿಂಗ್ ಮಾಡುವವರು ಈ ದ್ವೀಪಕ್ಕೆ ತಪ್ಪದೇ ಹೋಗುತ್ತಾರೆ. ಅಪಾರ ಜಲಚರ, ಹವಳದ ದಿಬ್ಬಗಳನ್ನು ಇಲ್ಲಿ ಕಾಣಬಹುದಾಗಿದೆ.
* ಅಗಟ್ಟಿ ಐಲ್ಯಾಂಡ್: ಸುಂದರ ಸಮುದ್ರ ತೀರದಲ್ಲಿ ವಿಹಾರ ಕೈಗೊಳ್ಳಬಹುದು. ಜೊತೆಗೆ ರುಚಿಕಟ್ಟಾದ ಮೀನೂಟಕ್ಕೆ ಈ ಜಾಗ ಫೇಮಸ್ ಆಗಿದೆ. ಆಹಾರ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಈ ಐಲ್ಯಾಂಡ್.
* ಮರಿನ್ ಮ್ಯೂಸಿಯಂ: ಸಮುದ್ರದ ಜಲಚರ ಮ್ಯೂಸಿಯಂ ಇದು. ಚಿತ್ರವಿಚಿತ್ರ ಸಮುದ್ರ ಜೀವಿಗಳ ಪಳಯಳಿಕೆಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಅಧ್ಯಯನ ಪ್ರಿಯರ ಮೆಚ್ಚಿನ ತಾಣ ಈ ಮೂಸಿಯಂ.
* ಪಿಟ್ಟಿ ಪಕ್ಷಿಧಾಮ: ಲಕ್ಷದ್ವೀಪ ಎಂದ್ರೆ ಬರೀ ದ್ವೀಪಗಳು ಎಂಬ ಕಲ್ಪನೆ ಇದೆ. ಆದರೆ ಇಲ್ಲಿನ ಪಿಟ್ಟಿ ಪಕ್ಷಿಧಾಮ ಅಸಂಖ್ಯಾತ ವಿದೇಶಿ ಹಕ್ಕಿಗಳ ಗೂಡಾಗಿದೆ.