ಬೆಂಗಳೂರು: ಪ್ರವಾಸಿಗರು ಹೆಚ್ಚು ಇಷ್ಟಪಡುವ ಜಾಗದಲ್ಲಿ ದೊಡ್ಡಾಲದ ಮರವೂ ಒಂದು. ಆದರೆ ಬುಧವಾರ ಬೆಳಗ್ಗೆ ಈ ಪಾರಂಪರಿಕ ವೃಕ್ಷ ಧರೆಗುರುಳಿದೆ.
Advertisement
ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ‘ದೊಡ್ಡಾಲದ ಮರ’ ಇಡೀ ದೇಶದ ಗಮನ ಸೆಳೆದಿದೆ. ಈ ದೊಡ್ಡಾಲದ ಮರಕ್ಕೆ 400 ವರ್ಷಗಳ ಇತಿಹಾಸವಿದ್ದು, ಈಗ ಎರಡು ಬೃಹದಾಕಾರದ ಆಲದ ಮರಗಳು ಧರೆಗೆ ಉರುಳಿದೆ. ಇದು ಮೂರು ಎಕ್ರೆ ವಿಸ್ತಾರಕ್ಕೆ ಚಾಚಿಕೊಂಡಿದ್ದು, ಭಾನುವಾರ ಸುರಿದ ಗಾಳಿ ಮಳೆಗೆ ಮರ ಧರೆಗೆ ಉರುಳಿದೆ ಎಂದು ತೋಟಗಾರಿಕ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಎಂಪಿ ಶಿಕ್ಷಣ ಸಚಿವರ ಸೊಸೆ
Advertisement
Advertisement
ಆದ್ರೇ ಸ್ಥಳೀಯರು, ತೋಟಗಾರಿಕೆ ಇಲಾಖೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡಾಲದ ಮರ ಧರೆಗುರುಳಿದೆ. ಇಲ್ಲಿ ಹುಲ್ಲಿನ ಹಾಸು ಹಾಕೋದಕ್ಕೆ ಮರದ ಬುಡದಲ್ಲಿರುವ ಮಣ್ಣನ್ನು ಸಿಬ್ಬಂದಿ ತೆಗೆದುಹಾಕಿದ್ದಾರೆ. ಇದ್ರಿಂದ ಈ ಅನಾಹುತ ಸಂಭವಿಸಿದೆ ಎಂದು ಆರೋಪ ಮಾಡಿದ್ದಾರೆ.
Advertisement
ಅಲ್ಲದೇ ಇನ್ನಷ್ಟು ಮರಗಳು ಬಾಗಿದ ಸ್ಥಿತಿಯಲ್ಲಿದೆ. ಈ ಬಗ್ಗೆ ಸಿಬ್ಬಂದಿ, ಇಲಾಖೆಗೆ ಪತ್ರ ಬರೆದಿದ್ದಾರೆ.