ರಾಮನಗರ: ಗ್ರಾಮಸ್ಥರು ಹಾಗೂ ಧಾರ್ಮಿಕ ದತ್ತಿ ಜಟಾಪಟಿಗೆ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಇತಿಹಾಸ ಪ್ರಸಿದ್ದ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ರದ್ದಾಗಿದೆ.
ರಾಮನಗರದ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆಯುವ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ದೇವಾಲಯವು ಮುಜರಾಯಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ವಿಜಯ್ ಕುಮಾರ್ ಬಿದ್ದು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರು ಧಾರ್ಮಿಕ ದತ್ತಿ ಇಲಾಖೆಗೆ ದೊಡ್ಡದಾಗಿದ್ದ ಅಗ್ನಿಕೊಂಡದ ಉದ್ದವನ್ನು ಚಿಕ್ಕದಾಗಿ ಮಾಡುವಂತೆ ಮನವಿ ಮಾಡಿದ್ದರು.
Advertisement
Advertisement
ಆದ್ದರಿಂದ ಧಾರ್ಮಿಕ ದತ್ತಿ ಇಲಾಖೆ ಈ ಬಾರಿ ಜಾತ್ರೆ ವೇಳೆ 60 ಅಡಿ ಉದ್ದದ ಅಗ್ನಿಕೊಂಡವನ್ನ 15 ಅಡಿಗೆ ಇಳಿಸಿದೆ. ಅಗ್ನಿಕೊಂಡದ ಎರಡು ಬದಿಯಲ್ಲಿ ಇಟ್ಟಿಗೆ ಇಟ್ಟು ಅದರ ಉದ್ದವನ್ನು ಕಡಿಮೆ ಮಾಡಲಾಗಿದೆ. ಆದರೆ ಈ ಕ್ರಮಕ್ಕೆ ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ಗ್ರಾಮಸ್ಥರು, ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದು, ಇಲಾಖೆ ಸಿಬ್ಬಂದಿ ಹಾಗೂ ಭಕ್ತರ ನಡುವೆ ಮಾತಿ ಚಕಮಕಿ ನಡೆದಿದೆ. ಈ ಜಗಳದಿಂದ ಸದ್ಯ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವವನ್ನು ರದ್ದುಗೊಳಿಸಲಾಗಿದೆ.