ರಾಯಚೂರು: ಜಿಲ್ಲೆಯ ಸಿಂಧನೂರಿನ (Sindhanuru) ಐತಿಹಾಸಿಕ ಅಂಬಾಮಠದ ಅಂಬಾದೇವಿ ಜಾತ್ರೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ 1.20 ಲಕ್ಷ ರೂ. ಮೌಲ್ಯದ 1,146 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ.
ಜಾತ್ರೆಯಲ್ಲಿ ಜನರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವಿಜಯನಗರ ಜಿಲ್ಲೆ ಮೂಲದ ಮಹ್ಮದ್ ಶಾಬಾಜ್ ಹಾಗೂ ಆಜಂ ಶೋಯಲ್‌ನಿಂದ 1.10 ಲಕ್ಷ ರೂ. ಮೌಲ್ಯದ 1,100 ಗ್ರಾಂ ಜಪ್ತಿ ಮಾಡಲಾಗಿದೆ. ಇನ್ನೂ ಸಿಂಧನೂರು ನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದ ಕೊಪ್ಪಳ ಮೂಲದ ದುರುಗಪ್ಪನಿಂದ 10,000 ರೂ. ಮೌಲ್ಯದ 46.10 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ.ಇದನ್ನೂ ಓದಿ: 400 ವರ್ಷಗಳ ಇತಿಹಾಸವಿರುವ ಅಂಬಾದೇವಿ ಜಾತ್ರೆಯಲ್ಲಿ ಗಾಂಜಾ ಘಾಟು – ಸಾಧು ಸಂತರಿಗೆ, ಭಕ್ತರಿಗೂ ಕಿಕ್
ಸಿಂಧನೂರು ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಮೂವರು ಆರೋಪಿಗಳನ್ನ ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾದಕ ವಸ್ತುಗಳ ಮಾರಾಟ ತಡೆಗೆ ಜಾತ್ರೆಯಲ್ಲಿ ಪೊಲೀಸ್ ಕಣ್ಗಾವಲು ಹಾಕಿದ್ದರು. ಈ ವೇಳೆ ದಂಗೆಕೋರರು ಗಾಂಜಾ ಮಾರಾಟ ನಡೆಸಿದ್ದಾರೆ.ಇದನ್ನೂ ಓದಿ:ವಿಜೃಂಭಣೆಯ ಅಂಬಾದೇವಿ ಮಹಾರಥೋತ್ಸವ – ಜಂಬೂಸವಾರಿಗೆ ಸಿಎಂ ಚಾಲನೆ

