CrimeLatestMain PostNational

ಮಹಿಳೆಯ ಮೇಲೆ ಅತ್ಯಾಚಾರಗೈದು 1,25,000 ರೂ. ವಂಚಿಸಿದ ಅರ್ಚಕ

ಚಂಡೀಗಢ: ದೇವಸ್ಥಾನದ ಅರ್ಚಕನೊಬ್ಬ ಮಹಿಳೆ ಮೇಲೆ ಅತ್ಯಾಚಾರಗೈದು ಒಂದು ಲಕ್ಷ 15 ಸಾವಿರ ರೂ. ಹಾಗೂ ಚಿನ್ನಾಭರಣ ವಂಚಿಸಿರುವ ಘಟನೆ ಹರಿಯಾಣದ ಹಿಸಾರ್‌ನಲ್ಲಿ ನಡೆದಿದೆ.

ಅರ್ಚಕ ನರೇಶ್ ಅತ್ಯಾಚಾರಗೈದ ಆರೋಪಿ. ಆತ ಸಂತ್ರಸ್ತೆಯ ನೆರೆಹೊರೆಯಲ್ಲಿ ವಾಸವಾಗಿದ್ದು, ಅಲ್ಲಿಯೇ ಸಮೀಪದಲ್ಲೇ ಮನೆಯೊಂದನ್ನು ಖರೀದಿಸಿದ್ದನು. ಈ ವೇಳೆ ಸಂತ್ರಸ್ತೆಯ ಮನೆಗೆ ಆಗಾಗ ಭೇಟಿ ನೀಡಲು ಆರಂಭಿಸಿದ್ದನು. ಇದನ್ನೂ ಓದಿ: ವಿವಾಹಿತೆಯ ಅನುಮಾನಾಸ್ಪದ ಸಾವು

BRIBE

ಆರೋಪಿಯು ಒಂದು ದಿನ ಮಹಿಳೆ ಮತ್ತು ಅವರ ಅತ್ತೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದನು. ಈ ವೇಳೆ ನಿಮ್ಮ ಕುಟುಂಬ ಸಂಕಷ್ಟದಲ್ಲಿದೆ ಪೂಜೆಯಿಂದ ನೋವು ನಿವಾರಣೆಯಾಗುತ್ತದೆ ಎಂದಿದ್ದನು. ಆ ನಂತರ ಮಹಿಳೆಯ ಮನೆಗೆ ಅವನ ಭೇಟಿ ಹೆಚ್ಚಾಯಿತು. ಒಂದು ದಿನ ಆತ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿ ಅಶ್ಲೀಲ ವೀಡಿಯೋ ಕೂಡ ಮಾಡಿದ್ದನು. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣ

ಮಹಿಳೆಯ ಪತಿ ಸಿಆರ್‍ಪಿಎಫ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬೇರೆ ರಾಜ್ಯದಲ್ಲಿ ನಿಯೋಜಿಸಲಾಗಿದೆ. ಇದರ ಲಾಭ ಪಡೆದ ಅರ್ಚಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಗಲಾಟೆ ಮಾಡಿದರೆ, ದೂರು ಕೊಟ್ಟರೆ ಸಾಯಿಸುತ್ತೇನೆ ಅಂತ ಕೂಡಾ ಹೆದರಿಸಿದ್ದನು. ತನ್ನಲ್ಲಿರುವ ಆ ಅಶ್ಲೀಲ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಒಂದು ಲಕ್ಷ 15 ಸಾವಿರ ರೂ. ಹಾಗೂ ಚಿನ್ನಾಭರಣವನ್ನೂ ವಂಚಿಸಿದ್ದನು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಈ ಪ್ರಕರಣದಲ್ಲಿ ಅತ್ಯಾಚಾರ ಸೇರಿದಂತೆ ಇತರೆ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಾಮಾಚಾರದ ಭಯವನ್ನೂ ತೋರಿಸಿ ರೂಪಾಯಿ ಸುಲಿಗೆ ಮಾಡಿದ್ದಾರೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂದು ಹಿಸಾರ್‍ನ ಆಜಾದ್ ನಗರ ಪೊಲೀಸ್ ಠಾಣೆ ಪ್ರಭಾರಿ ಸದಾನಂದ್ ಆಜಾದ್ ತಿಳಿಸಿದ್ದಾರೆ.

ಘಟನೆಯು ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 

Leave a Reply

Your email address will not be published.

Back to top button