ಮುಂಬೈ: ವ್ಯಕ್ತಿಯೊಬ್ಬರ ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡು, ಒಂದು ಕ್ಷಣ ಭಯದ ವಾತಾವರಣ ನಿರ್ಮಾಣವಾದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಮೊಬೈಲ್ ಸ್ಫೋಟಗೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ತಿಂಗಳ 4ರಂದು ಮುಂಬೈನ ಭಂಡಪ್ ಪ್ರದೇಶದ ಖಾಸಗಿ ಹೋಟೆಲ್‍ವೊಂದರಲ್ಲಿ ಈ ಘಟನೆ ನಡೆದಿದೆ. ಹೋಟೆಲ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
Advertisement
ವಿಡಿಯೋದಲ್ಲಿ ಏನಿದೆ?
ಹೋಟೆಲ್‍ನಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುತ್ತದೆ. ತಕ್ಷಣವೇ ವ್ಯಕ್ತಿ ಮೊಬೈಲ್‍ನನ್ನು ಜೇಬಿನಿಂದ ಹೊರ ತೆಗೆದು ಏಸೆಯುತ್ತಾರೆ. ಶಬ್ಧ ಕೇಳಿದ ಸುತ್ತಮುತ್ತಲಿನ ಜನರು ಹೆದರಿ ಬಾಗಿಲ ಬಳಿ ಹೋಗಿ ನಿಂತಿದ್ದಾರೆ. ಮೊಬೈಲ್ ಸ್ಫೋಟಗೊಂಡು ಹೊಗೆ ಬಂದಿದ್ದರಿಂದ ಒಂದು ಕ್ಷಣ ಹೋಟೆಲ್‍ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಈ ಎಲ್ಲ ದೃಶ್ಯಗಳು ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
Advertisement
#WATCH: Mobile phone blasts in man's pocket in Mumbai's Bhandup. (Source: CCTV Footage) (4.6.2018) pic.twitter.com/2oC9uudHq6
— ANI (@ANI) June 5, 2018
Advertisement
ಜೇಬಿನಿಂದ ಮೊಬೈಲ್ ಸ್ಫೋಟಗೊಂಡ ಪರಿಣಾಮ ಅದೃಷ್ಟವಶಾತ್ ವ್ಯಕ್ತಿ ಬದುಕುಳಿದಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಆದ್ರೆ ಯಾವ ಕಂಪೆನಿಯ ಮೊಬೈಲ್ ಸ್ಫೋಟಗೊಂಡಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.
Advertisement
ಮಾರ್ಚ್ ತಿಂಗಳಿನಲ್ಲಿ ಇದೇ ರೀತಿಯ ಘಟನೆಯೊಂದು ಒರಿಶಾದ ಖೇರಿಕಾನಿ ಜಿಲ್ಲೆಯಲ್ಲಿ ನಡೆದಿತ್ತು. 18 ವರ್ಷದ ಯುವತಿ ಮೊಬೈಲ್ ಚಾರ್ಜ್ ಗೆ ಇಟ್ಟು ತನ್ನ ಸಂಬಂಧಿಕರ ಜೊತೆಗೆ ಮಾತನಾಡುವ ವೇಳೆ ಮೊಬೈಲ್ ಸ್ಫೋಟಗೊಂಡಿದ್ದರಿಂದ ಗಾಯಗೊಂಡಿದ್ದರು.