– ಬಿಎಸ್‍ವೈ ಅವರನ್ನು ಯಾರೂ ಸೈಡ್‍ಲೈನ್ ಮಾಡಿಲ್ಲ
ದಾವಣಗೆರೆ: ಹಿಂದುತ್ವದ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ಪಿಯು ಅಧ್ಯಯನ ಸಂದರ್ಭದಲ್ಲಿ ಆರ್‍ಎಸ್‍ಎಸ್ (RSS) ಸಂಪರ್ಕಕ್ಕೆ ಬಂದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಮಾತನಾಡಿದ ಅವರು, ರಾಮಮಂದಿರ ರಥ ಯಾತ್ರೆಯಿಂದ ಸಂಪೂರ್ಣ ಬಿಜೆಪಿಯಲ್ಲಿ ತೊಡಗಿಸಿಕೊಂಡೆ. ದೇಶದಲ್ಲಿ ಹಿಂದುತ್ವ ರಕ್ಷಣೆ ಮಾಡಿದ್ದು ಆರ್‍ಎಸ್‍ಎಸ್ ಎಂದು ಸಮರ್ಥಿಸಿಕೊಂಡರು.
Advertisement
Advertisement
ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗೆ ಪ್ರಯತ್ನಿಸುತ್ತಿದ್ದು, ಅವರ ಮತಗಳನ್ನು ಪಡೆಯಲು ಹೆಚ್ ಡಿಕೆ ಹಾಗೂ ಸಿದ್ದರಾಮಯ್ಯ ಸ್ಪರ್ಧಗೆ ಇಳಿದು ಆರ್ ಎಸ್ ಎಸ್ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಅದೇಷ್ಟೋ ಮುಸ್ಲಿಮರು ಜೈ ಶ್ರೀರಾಮ್ ಎಂದು ಹೇಳುವ ವೀಡಿಯೋಗಳು ನನ್ನ ಕಡೆ ಇವೆ. ಪಾಕಿಸ್ತಾನದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದ್ರೆ ಕೊಚ್ಚಿ ಹಾಕ್ತಾರೆ. ಆದರೆ ನಮ್ಮ ಪ್ರತಿಪಕ್ಷದ ನಾಯಕರು ಹಾಗೂ ಹೆಚ್‍ಡಿಕೆ ಹಿಂದುತ್ವದ ವಿರೋಧಿಯಾಗಿ ಅಲ್ಪಸಂಖ್ಯಾತರ ಓಲೈಸುವ ಹೇಳಿಕೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮದ ಅಫೀಮು ತಿಂದು ಅಮಲಿನಲ್ಲಿ ತೇಲಾಡುತ್ತಿರೋ ಬಿಜೆಪಿಗರು ನಿಜವಾದ ಡ್ರಗ್ಗಿಸ್ಟ್‌ಗಳು: ಶ್ರೀನಿವಾಸ್ ಬಿ.ವಿ
Advertisement
Advertisement
ಮಾಜಿ ಸಿಎಂ ಬಿಎಸ್‍ವೈ ಅವರನ್ನು ಯಾರೂ ಸೈಡ್ ಲೈನ್ ಮಾಡಿಲ್ಲ, ಮಾಡುವ ಪ್ರಶ್ನೆಯೂ ಇಲ್ಲ. ಉಪಚುನಾವಣೆಯಲ್ಲಿ ಬಿಎಸ್‍ವೈ ಪ್ರಚಾರಕ್ಕೆ ಆಗಮಿಸುತ್ತಿದ್ದು, ಅವರನ್ನು ಪಕ್ಷವಾಗಲಿ ಅಥವಾ ವರಿಷ್ಠರಾಗಲಿ ಸೈಡ್ ಲೈನ್ ಮಾಡಿಲ್ಲ ಎಂದರು. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್
ಇದೇ ವೇಳೆ ಬಿಎಸ್‍ವೈ ಅವಧಿಯಲ್ಲಿ ಬೊಮ್ಮಾಯಿ ಭ್ರಷ್ಟಾಚಾರ ಮಾಡಿದ್ರು ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರತಿ ಪಕ್ಷದ ನಾಯಕರಿಗೆ ವಿರೋಧಿಸಲು ಯಾವುದೇ ವಿಷಯಗಳಿಲ್ಲ. ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವ ಆಂಜನೇಯ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳಿದ್ದವು. ಅದರಲ್ಲಿ ಸಿದ್ದರಾಮಯ್ಯ ಅವರ ಕೈವಾಡ ಇತ್ತು ಎಂದು ಹೇಳಬಹುದಾ.? ಸಿದ್ದರಾಮಯ್ಯ ಟಿಪ್ಪು ಜಯಂತಿ ಜಾರಿಗೊಳಿಸಿದ್ರು, ಅದು ರಾಜಕೀಯ ಪ್ರೇರಿತ ಎಂಬುದು ಎಲ್ಲರೂ ಮನದಟ್ಟಾಗಿದೆ ಎಂದು ಹೇಳಿದರು.
ಮುಂದಿನ ಸಿಎಂ ವಿಷಯವಾಗಿ ಮತನಾಡಿದ ರೇಣುಕಾಚಾರ್ಯ, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಈಗಾಗಲೇ ಸ್ಪಷ್ಟಪಡಿಸಿದ್ದು, 2023ರ ವಿಧಾನಸಭೆ ಚುನಾವಣೆ ನೇತೃತ್ವ ಸಿಎಂ ಬೊಮ್ಮಾಯಿ ವಹಿಸಲಿದ್ದಾರೆ. ಚುನಾವಣೆ ನೇತೃತ್ವ ಅಂದರೆ ಅರ್ಥ ಮುಂದಿನ ಸಿಎಂ ಎಂಬುದೇ ಆಗಿದೆ. ಕಳೆದ ಬಾರಿ ಬಿಎಸ್‍ವೈ ಚುನಾವಣೆ ನೇತೃತ್ವ ವಹಿಸಿದ್ದರು, ಅವರೇ ಸಿಎಂ ಆದರು. ಈಗಲೂ ಹಾಗೇಯೇ ಚುನಾವಣೆ ನೇತೃತ್ವ ವಹಿಸಿದವರೆ ಸಿಎಂ ಬಸವರಾಜ ಬೊಮ್ಮಾಯಿ ಮುಂದಿನ ಸಿಎಂ ಆಗ್ತಾರೆ. ಸುಧಾಕರ್ ಹಾಗೂ ನನ್ನ ನಡುವೆ ಯಾವುದೇ ವೈಯುಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್ ಕಲಿಸಿಕೊಟ್ಟಿರೋದೇ ನೀಲಿಚಿತ್ರ ನೋಡೋದು: ಹೆಚ್‍ಡಿಕೆ