ಬೆಂಗಳೂರು: ವ್ಯಾಪಾರ ದಂಗಲ್ ಮುಂದುವರಿದಿದ್ದು ಈಗ ಜಯನಗರದ ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಯಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ಅನುಮತಿಸಬಾರದೆಂಬ ಆಗ್ರಹ ಕೇಳಿಬಂದಿದೆ.
ಈ ಬಗ್ಗೆ ದೇವಸ್ಥಾನ ಮಂಡಳಿ ಪ್ರತಿಕ್ರಿಯಿಸಿದ್ದು, ನಮ್ಮದು ಟ್ರಸ್ಟ್ ಆಧಾರಿತ ದೇಗುಲ. ಹೀಗಾಗಿ ನಮ್ಮ ಅಧಿಕಾರ ಏನಿದ್ದರೂ ದೇವಾಲಯದ ಆವರಣಕ್ಕೆ ಸೀಮಿತ ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜಿಲ್ಲ: ಬೊಮ್ಮಾಯಿ
Advertisement
Advertisement
ಹಿಂದೂ ಸಂಘಟನೆಗಳ ಕರೆಗೆ ಬೀದಿ ಬದಿ ವ್ಯಾಪಾರಿಗಳ ಸಂಘ ಆಕ್ರೋಶ ಹೊರಹಾಕಿದೆ. ಮುಜುರಾಯಿ ಇಲಾಖೆಯೂ ಸ್ಪಷ್ಟನೆ ನೀಡಿ, ದೇವಾಲಯದ ಹೊರಗೆ ಇಂಥವರೇ ವ್ಯಾಪಾರ ಮಾಡಬೇಕು ಎಂಬ ನಿಯಮವಿಲ್ಲ. ಈ ರೀತಿಯ ನಿರ್ಬಂಧದ ಕರೆ ನೀಡುವುದು ತಪ್ಪು. ಯಾರಾದರೂ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.
Advertisement
ಮುಜುರಾಯಿ ವ್ಯಾಪ್ತಿಯ ದೇಗುಲಗಳಿಗೆ ಮಾತ್ರ ಹಿಂದೂಯೇತರರ ವ್ಯಾಪಾರರ ನಿರ್ಬಂಧಕ್ಕೆ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದೆ.
Advertisement
ಎರಡು ದಿನದ ಹಿಂದೆ ವಿವಿ ಪುರಂ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಅನ್ಯಧರ್ಮಿಯರ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು.