ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ (Vidhanasabha Election) ಯಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಅಧಿಕ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕೆಂದು ಪ್ಲಾನ್ ಹಾಕಿಕೊಂಡಿರುವ ಬಿಜೆಪಿ (BJP) ಮಂಡ್ಯ ಗೆಲ್ಲಲು ಹಿಂದುತ್ವದ ಅಜೆಂಡಾ ಹಿಡಿದು ಹೊರಟಿದೆ. ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮೂಲಕ ಚುನಾವಣೆಯ ರಂಗು ಹೆಚ್ಚಿಸಲು ಮುಂದಾಗಿದೆ.
ಹೌದು. ಇಷ್ಟು ದಿನಗಳ ಕಾಲ ಜಾಮಿಯಾ ಮಸೀದಿಯಲ್ಲ ಅದು ಹನುಮನ ಮಂದಿರ ಎಂದು ಹಿಂದೂಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದವು. ಈ ವೇಳೆ ರಾಜ್ಯ ಬಿಜೆಪಿ ಈ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿತ್ತು. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರು ಮಂಡ್ಯದ ಎಲ್ಲಾ ಬಿಜೆಪಿ ಕಾರ್ಯಕ್ರಮಗಳಲ್ಲೂ ಜಾಮಿಯಾ ಮಸೀದಿಯ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ (Sacchidananda) ಪರ ಇಂಡುವಾಳುನಲ್ಲಿ ನಡೆದ ಸಭೆಯಲ್ಲಿ ಜಾಮಿಯಾ ಮಸೀದಿ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ರಂಗನಾಥಸ್ವಾಮಿ ಹಾಗೂ ಆಂಜನೇಯಸ್ವಾಮಿಯ ಕಾಲ ಬರುತ್ತಿದೆ. ಇದನ್ನೂ ಓದಿ: ಕಳೆದ ಬಾರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತಾ?
ಜಾಮಿಯಾ ಮಸೀದಿ ಅದು ಹನುಮಂತನ ಮಂದಿರ, ಇಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕಟ್ಟುವುದು ನಮ್ಮ ಕಮಿಟ್ಮೆಂಟ್ ಆಗಿದೆ. ಮುಸ್ಲಿಮರಿಗೆ ನಾವೇನು ಬರೆದು ಕೊಟ್ಟಿಲ್ಲ ಮಸೀದಿ ಮಾಡಿಕೊಳ್ಳಿ ಅಂತಾ. ನಮ್ಮದನ್ನ ಕಿತ್ತುಕೊಂಡಿರುವುದನ್ನು ನಮಗೆ ಕೊಡಲೇ ಬೇಕು. ನಿಮಗೆ ಒಂದಕ್ಕೆ ಎರಡು ಮಸೀದಿಯನ್ನು ಕಟ್ಟಿಕೊಡುತ್ತೇವೆ. ನಮ್ಮ ಆಂಜನೇಯಸ್ವಾಮಿ ದೇವಸ್ಥಾನದ ತಂಟೆಗೆ ಯಾರೂ ಬರಬೇಡಿ ಎಂದು ಹೇಳುವ ಮೂಲಕ ಸಿ.ಟಿ.ರವಿ ಚುನಾವಣೆಯಲ್ಲಿ ಮಂದಿರ ಮತ್ತು ಮಸೀದಿ ಫೈಟ್‍ನ್ನು ಶುರು ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k