ನವದೆಹಲಿ: ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಹಾರ್ಲಿಕ್ಸ್ ಅನ್ನು ಹೆಲ್ತ್ ಬದಲು ನ್ಯೂಟ್ರಿಷನಲ್ ಡ್ರಿಂಕ್ ಆಗಿ ಬದಲಾಯಿಸಿದೆ.
ಇದುವರೆಗೂ ಇದ್ದ ‘ಹೆಲ್ತ್ ಫುಡ್ ಡ್ರಿಂಕ್’ ಕೆಟಗರಿಯನ್ನು ಫಂಡಮೆಂಟಲ್ ನ್ಯೂಟ್ರಿಷನಲ್ ಡ್ರಿಂಕ್ ಎಂಬುದಾಗಿ ಬದಲಿಸಿದೆ. ಹಾರ್ಲಿಕ್ಸ್‌ನಿಂದ (Horlicks) ಈಗ ಹೆಲ್ತ್ ಎಂಬ ಲೇಬಲ್ ಅನ್ನು ಕೈಬಿಟ್ಟಿದೆ. ಎಚ್‌ಯುಎಲ್‌ನ ಮುಖ್ಯ ಹಣಕಾಸು ಅಧಿಕಾರಿ ರಿತೇಶ್ ತಿವಾರಿ ಪ್ರಕಟಣೆ ಮೂಲಕ ವಿಚಾರ ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣದ ಶ್ರೀಮಂತ ಅಭ್ಯರ್ಥಿ – ಓವೈಸಿ ವಿರುದ್ಧ ಅಖಾಡಕ್ಕಿಳಿದಿರೋ ಮಾಧವಿ ಲತಾ ಆಸ್ತಿ ಎಷ್ಟಿದೆ ಗೊತ್ತಾ?
Advertisement
Advertisement
‘ಆರೋಗ್ಯಕರ ಪಾನೀಯಗಳು’ ಕೆಟಗರಿಯಿಂದ ಪಾನೀಯಗಳನ್ನು ಕೈಬಿಡಬೇಕು ಎಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ನಿರ್ದೇಶನ ನೀಡಿದ ಬಳಿಕ ಈ ಕ್ರಮಕೈಗೊಳ್ಳಲಾಗಿದೆ.
Advertisement
Advertisement
‘ಫಂಡಮೆಂಟಲ್ ನ್ಯೂಟ್ರಿಷನಲ್ ಡ್ರಿಂಕ್’ ಪ್ರೊಟೀನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯ ಅಗತ್ಯಗಳನ್ನು ಪೂರೈಸುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಪಾಟ್ನಾ ಜಂಕ್ಷನ್ ಬಳಿಯ ಹೋಟೆಲ್‌ಗಳಲ್ಲಿ ಅಗ್ನಿ ಅವಘಡ – 6 ಮಂದಿ ಸಾವು