ಜೈಪುರ: ಪಾಕಿಸ್ತಾನದಲ್ಲಿ (Pakistan) ಉಂಟಾದ ಭೀಕರ ಪ್ರವಾಹದ (Flood) ನಂತರ ಪರಿಹಾರ ನೀಡುವ ಕಾರ್ಯದಲ್ಲಿ ನಡೆದ ಕಿರುಕುಳ ಹಾಗೂ ತಾರತಮ್ಯದ ಬೆನ್ನಲ್ಲೇ ಸುಮಾರು 100 ಹಿಂದೂಗಳು ಭಾರತಕ್ಕೆ (India) ಬಂದಿದ್ದಾರೆ.
ಭಿಲ್ ಸಮುದಾಯಕ್ಕೆ ಸೇರಿದ ಹಾಗೂ ಸಿಂಧ್‍ನ ತಂಡೋ ಅಲ್ಲಾಯಾರ್ ಜಿಲ್ಲೆಯಿಂದ 2 ಬ್ಯಾಚ್ ವಲಸಿಗರು ಭಾರತಕ್ಕೆ ಬಂದಿದ್ದಾರೆ.
Advertisement
Advertisement
ಆ ಬ್ಯಾಚ್‍ನಲ್ಲಿದ್ದ ಚತುರರಾಮ್ ಭಿಲ್ ಮಾತನಾಡಿ, ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹದಿಂದಾಗಿ ನಮ್ಮ ಜೀವನ ಶೋಚನೀಯವಾಗಿತ್ತು. ಅದಾದ ಬಳಿಕ ಪರಿಹಾರ ಕಾರ್ಯದಲ್ಲೂ ತಾರತಮ್ಯ ಉಂಟಾಯಿತು. ಅಷ್ಟೇ ಅಲ್ಲದೇ ನಮ್ಮ ಕುಟುಂಬವನ್ನು ಪೋಷಿಸಲು ಯಾವುದೇ ಕೆಲಸವಿರಲಿಲ್ಲ. ಆಹಾರವನ್ನು ಖರೀದಿಸಲು ಸಾಕಷ್ಟು ಹಣವಿರಲಿಲ್ಲ. ಮನೆಗಳು ಕೊಚ್ಚಿ ಹೋಗಿದ್ದರಿಂದ ವಾಸಿಸಲು ಯಾವುದೇ ಸ್ಥಳವಿರಲಿಲ್ಲ. ಇದರಿಂದಾಗಿ ಭಾರತಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
Advertisement
ನಾವು 2 ಬ್ಯಾಚ್‍ಗಳನ್ನು ಮಾಡಿಕೊಂಡು ಭಾರತಕ್ಕೆ ಬಂದಿದ್ದು, ಈ 2 ಗುಂಪುಗಳು ಅಟ್ಟಾರಿ- ವಾಘಾ ಚೆಕ್‍ಪೋಸ್ಟ್ ಮೂಲಕ ಭಾರತಕ್ಕೆ ತಲುಪಿದೆವು. ಅದರಲ್ಲಿ ಸುಮಾರು 100 ಜನರಿದ್ದೇವೆ. ಅವರಲ್ಲಿ ನಾನು, ನನ್ನ ಪತ್ನಿ ಹಾಗೂ 8 ಮಕ್ಕಳೊಂದಿಗೆ ಬಂದಿದ್ದೇನೆ. ಮೊದಲ ಗುಂಪು ಅ. 12ರಂದು ಭಾರತವನ್ನು ತಲುಪಿದರೆ, ಇನ್ನೊಂದು ಅ. 14ರಂದು ಬಂದಿತು ಭಾರತದಲ್ಲೇ ನೆಲೆಸಲು ಇಚ್ಛೆ ಪಡುತ್ತೇವೆ. ಅಷ್ಟೇ ಅಲ್ಲದೇ ಮರಳಿ ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ ಎಂದರು.
Advertisement
ಈ 2 ಗುಂಪುಗಳು ಮೊದಲು ಹರಿದ್ವಾರ ತುಲುಪಿ ಅಲ್ಲಿಂದ ಜೋಧಪುರಕ್ಕೆ ಪ್ರಯಾಣ ಬೆಳಸಿತು. ಅವರಲ್ಲಿ ಕೆಲವರು ಜೋಧ್‍ಪುರದಲ್ಲಿ ನೆಲೆಸಿದ್ದು, ಇನ್ನೂ ಕೆಲವರು ರಾಜಸ್ಥಾನದ ಜೈಸಲ್ಮೇರ್‌ಗೆ ತೆರೆಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಕಣ್ಣಿನಪೊರೆ ಸಮಸ್ಯೆ – ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ
ಈ ಬಗ್ಗೆ ಅಲ್ಲಿನ ಎಸ್ಪಿ ಮಾತನಾಡಿ, ನಾವು ಕಾನೂನು ಪ್ರಕಾರವಾಗಿ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದೆವೆ ಎಂದು ತಿಳಿಸಿದರು. ಇದನ್ನೂ ಓದಿ: ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ: ಇಶಾ ಫೌಂಡೇಶನ್