ಲಕ್ನೋ: ಉತ್ತರಪ್ರದೇಶದ (UttarPradesh) ಸಂಭಾಲ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಹಿಂದೂಗಳ (Hindu Community) ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಎಐಎಂಐಎಂ (AIMIM) ಅಧ್ಯಕ್ಷ ಶೌಕತ್ ಅಲಿ (Shaukat Ali) ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಶೌಕತ್ ಅಲಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153-A (ಧರ್ಮ, ಜನಾಂಗ, ಜನ್ಮ ಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಮತ್ತು 295-A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ
Advertisement
“We ruled for eight hundred years, Hindus used to bow before us with their hands behind them” : #AIMIM's state president Shaukat Ali. pic.twitter.com/h0eROSALLf
— Hemir Desai (@hemirdesai) October 15, 2022
Advertisement
ಶೌಕತ್ ಅಲಿ ಹೇಳಿದ್ದೇನು?: ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶೌಕತ್ ಅಲಿ (Shaukat Ali), 832 ವರ್ಷಗಳ ಕಾಲ ಮುಸ್ಲಿಮರು (Muslims) ಹಿಂದೂಗಳ ಮೇಲೆ ಆಳ್ವಿಕೆ ನಡೆಸಿದರು. ಆಗ ಹಿಂದೂಗಳು ಮುಸ್ಲಿಂ ದೊರೆಗಳ ಮುಂದೆ ಕೈ ಜೋಡಿಸಿ `ಜಿ, ಹುಜೂರ್’ ಎಂದು ತಲೆಬಾಗುತ್ತಿದ್ದರು. ಮುಸ್ಲಿಮರು ಎರಡು ಬಾರಿ ಮದುವೆಯಾಗುತ್ತಾರೆ (Marriage). ಇಬ್ಬರನ್ನೂ ಗೌರವದಿಂದ ನೋಡಿಕೊಳ್ಳುತ್ತಾರೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ, ಮೂವರು ಪ್ರೇಯಸಿಯರನ್ನ ಇಟ್ಟುಕೊಳ್ಳುತ್ತಾರೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಶಾಲಾ ಪ್ರಾರ್ಥನೆ ವೇಳೆ ಕುಸಿದು ಬಿದ್ದು ಬಾಲಕಿ ಸಾವು!
Advertisement
Advertisement
ಮುಂದುವರಿದು ಮಾತನಾಡಿದ ಅಲಿ, ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ, ಎರಡು ಮದುವೆಯಾಗುತ್ತಾರೆ ಎಂದು ಹಿಂದೂಗಳು ಆರೋಪಿಸುತ್ತಾರೆ. ನಾವು ಎರಡು ಬಾರಿ ಮದುವೆಯಾಗುತ್ತೇವೆ ನಿಜ. ಆದರೆ ಇಬ್ಬರು ಹೆಂಡತಿಯರಿಗೂ ಗೌರವ ನೀಡುತ್ತೇವೆ. ಆದರೆ ನೀವು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಇಟ್ಟುಕೊಳ್ಳುವುದು ಯಾರಿಗೂ ತಿಳಿದಿಲ್ಲ. ಅವರಲ್ಲಿ ಯಾರಿಗೂ ನೀವು ಗೌರವ ಕೊಡುವುದಿಲ್ಲ ಎಂದು ಕಿಡಿಕಾರಿದರು. ಮುಂದೆ ಬಿಜೆಪಿ ದುರ್ಬಲವಾದಾಗ ಹಿಂದೂಗಳು ಮುಸ್ಲಿಮರ ಹಿಂದೆ ಬರುತ್ತಾರೆ ಎಂದು ತಿಳಿಸಿದ್ದಾರೆ.