ಮದುವೆ ಅಂದ್ರೆ ಕೇವಲ ಎರಡು ಜೀವಗಳು ಒಂದಾಗುವುದಲ್ಲ, ಎರಡು ಕುಟುಂಬ, ಎರಡು ಹೃದಯಗಳು, ಎರಡು ಭಿನ್ನ ಪರಂಪರೆಗಳು ಒಂದಾಗುವ ಕ್ಷಣ. ಇಂತಹ ವಿವಾಹ ಇದೀಗ ಹಿಂದೂ-ಮುಸ್ಲಿಮರ (Hindu Muslims) ಸಾಮರಸ್ಯ ಬೆಸೆಯುವ ವೇದಿಕೆಯಾಗಿ ಗುರುತಿಸಿಕೊಂಡ ಅಪರೂಪದ ಘಟನೆ ಪುಣೆಯಲ್ಲಿ ನಡೆದಿದೆ.
ಹೌದು. ಭಾರಿ ಮಳೆ ಹಿನ್ನೆಲೆಯಲ್ಲಿ ಮುಸ್ಲಿಂ ಆರತಕ್ಷತೆ ಸಮಾರಂಭದ ವೇದಿಕೆಯಲ್ಲೇ ಹಿಂದೂ (Hindu) ದಂಪತಿಯೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದ್ದು, ಮಾನವೀಯತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಡ್ರೋನ್ ದಾಳಿ!
ಪುಣೆಯ ಅಲಂಕಾರನ್ ಲಾನ್ಸ್ ಎಂಬ ಬಯಲು ಮೈದಾನದಲ್ಲಿ ಮಂಗಳವಾರ ಸಂಜೆ 6.56ಕ್ಕೆ ನಡೆಯಬೇಕಿದ್ದ ಹಿಂದೂ ಕುಟುಂಬದ ಸಂಕ್ರತಿ ಕವಡೆ ಮತ್ತು ನರೇಂದ್ರ ಗಲಾಂಡೆ ಅವರ ವಿವಾಹ (Hindu Weddin) ಸಂಭ್ರಮಕ್ಕೆ ಎಲ್ಲ ಸಿದ್ಧತೆಗಳು ನಡೆದಿತ್ತು. ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲು ವೇದಿಕೆ ಸಜ್ಜಾಗಿತ್ತು, ಮಂತ್ರಗಳು ಘೋಷಗಳಷ್ಟೆ ಬಾಕಿ ಇತ್ತು. ಮದುವೆಗೆ ಬಂದ ಅತಿಥಿಗಳು ಕೂಡ ಮದುವೆ ಮನೆಯಲ್ಲಿ ಸಂತಸದಿಂದ ಇದ್ದರು.
ಅಷ್ಟರಲ್ಲಿ ಸಂಭವಿಸಿದ ಭಾರೀ ಮಳೆಯಿಂದ ಬಂಧುಗಳಲ್ಲಿ ಗೊಂದಲ ಸೃಷ್ಟಿಯಾಯಿತು. ಅಲ್ಲದೇ ಮದುವೆ ಸಂಪ್ರದಾಯಗಳಿಗೂ ಮಳೆ ಅಡ್ಡಿಯಾಯ್ತು. ಇದರಿಂದ ಮದುವೆ ನಿಂತೇ ಹೋಯ್ತು ಅನ್ನೋ ಆತಂಕ ಶುರುವಾಗಿತ್ತು. ಆದ್ರೆ ಮುಸ್ಲಿಂ ಕುಟುಂಬವೊಂದರ ನೆರವಿನಿಂದ ಹಿಂದೂ ವಧು-ವರ ದಾಂಪತ್ಯ ಜೀವನಕ್ಕೆ ಕಾಲಿಡುವಂತಾಯಿತು. ಇದನ್ನೂ ಓದಿ: ಸಂತ್ರಸ್ತೆ ಜೊತೆ ವಿವಾಹ; ಪೋಕ್ಸೊ ಕೇಸ್ ಅಪರಾಧಿಯನ್ನು ಜೈಲು ಶಿಕ್ಷೆಯಿಂದ ಪಾರು ಮಾಡಿದ ಸುಪ್ರೀಂ
ಮಳೆ ಶುರುವಾದ ತಕ್ಷಣ ಅಲಂಕಾರನ್ ಲಾನ್ಸ್ ಎಂಬ ಬಯಲು ಮೈದಾನದ ಸಮೀಪದಲ್ಲಿದ್ದ ಸಭಾಂಗಣವೊಂದರಲ್ಲಿ ಮುಸ್ಲಿಂ ಕುಟುಂಬದ ಮಾಹೀನ್ ಮತ್ತು ಮೊಹ್ಸಿನ್ ಕಾಜಿ ಅವರ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಗಲಾಂಡೆ ಪಾಟೀಲ್ ಕುಟುಂಬದ ಸದಸ್ಯರೊಬ್ಬರು ಸಪ್ತಪದಿ ಆಚರಣೆ ಪೂರ್ಣಗೊಳಿಸಲು ಸ್ವಲ್ಪ ಸಮಯದವರೆಗೆ ಸಭಾಂಗಣ ಬಳಸಲು ಅವಕಾಶ ಕೊಡುವಂತೆ ಕೇಳಿಕೊಂಡರು. ಇದಕ್ಕೆ ಮುಸ್ಲಿಂ ಕುಟುಂಬಸ್ಥರೂ ಒಪ್ಪಿ ಮದುವೆ ಆಚರಣೆಗೆ ಅವಕಾಶ ಮಾಡಿಕೊಟ್ಟರು.
ಬಳಿಕ ಪರಸ್ಪರ ಸಂಪ್ರದಾಯ ಮತ್ತು ಪೂರ್ಣ ಗೌರವದ ಆಚರಣೆಗಳೊಂದಿಗೆ ಹಿಂದೂ – ಮುಸ್ಲಿಂ ಜೋಡಿಯ ವಿವಾಹ ನೆರವೇರಿತು. ಬಳಿಕ ಎರಡೂ ಸಮುದಾಯದ ಜನರು ಜಂಟಿಯಾಗಿ ಔತಣ ಕೂಟ ನಡೆಸಿದರು. ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ