ಢಾಕಾ: ಎರಡು ಗುಂಪುಗಳ ಘರ್ಷಣೆ ವೇಳೆ ಶಿವನ ಮಂದಿರವೊಂದನ್ನು ನಾಶ ಮಾಡಿದ ಘಟನೆ ಬಾಂಗ್ಲಾದೇಶದ ತಂಗೈ ಜಿಲ್ಲೆಯಲ್ಲಿ ನಡೆದಿದೆ.
ತಂಗೈಲ್ ಜಿಲ್ಲೆಯ ಬತ್ರಾ ಗ್ರಾಮದ ಶಿವಾಯಲದ ಮೇಲೆ ಶುಕ್ರವಾರ 8ರಿಂದ 9 ಜನರ ಗುಂಪೊಂದು ದಾಳಿ ಮಾಡಿದೆ. ಈ ವೇಳೆ ದಾಳಿಯನ್ನು ತಡೆಯಲು ಮುಂದಾದ ದೇವಸ್ಥಾನದ ಮಾಲೀಕ ಹಾಗೂ ಅರ್ಚಕ ಚಿತ್ತರಂಜನ್ ಅವರ ಮೇಲೆಯೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಚಿತ್ತರಂಜನ್ 20 ವರ್ಷಗಳ ಹಿಂದೆ ಭೂಮಿಯನ್ನು ಪಡೆದು, ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಅದೇ ಗ್ರಾಮದ ಗುಂಪಿನಿಂದ ದೇವಾಯಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಚಿತ್ತರಂಜನ್ ಅವರಿಗೆ ಹಾಗೂ ಕುಟುಂಬಸ್ಥರಿಗೆ ತೊಂದರೆ ನೀಡಿ ದೇವಸ್ಥಾನದ ಜಾಗವನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಶಿವಾಲಯದಲ್ಲಿ ಕಳೆದ 20 ವರ್ಷಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಒಂದು ಗುಂಪು ದೇವಸ್ಥಾನದ ಜಾಗ ಪಡೆಯಲು ಮುಂದಾಗಿದೆ ಎಂದು ರಾಜನ್ ಎಂಬವರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ನಗರ್ ಪುರ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv