ಇಸ್ಲಮಾಬಾದ್: ಪಾಕಿಸ್ತಾನದಲ್ಲಿದ್ದ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಹಿಂದೂ ದೇಗುಲವನ್ನು 72 ವರ್ಷಗಳ ಬಳಿಕ ಮತ್ತೆ ತೆರೆದು, ಸಾರ್ವಜನಿಕರ ಭೇಟಿಗೆ ಮುಕ್ತಗೊಳಿಸಲಾಗಿದೆ.
ಪಾಕಿಸ್ತಾನದ ಸಿಯಾಲ್ ಕೋಟ್‍ನಲ್ಲಿ ‘ಶಾವಾಲಾ ತೇಜ ಸಿಂಗ್ ದೇವಾಲಯ’ ಇದೆ. ಈ ದೇವಾಲಯವನ್ನು 72 ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಆದರೆ ಈಗ ಮತ್ತೆ ದೇಗುಲದ ಬಾಗಿಲು ತೆರೆದಿದೆ. ಸಾವಿರ ವರ್ಷಗಳ ಹಿಂದೆ ಸರ್ದಾರ್ ತೇಜ್ ಸಿಂಗ್ ಅವರು ಶಾವಾಲಾ ತೇಜ ಸಿಂಗ್ ದೇವಾಲಯವನ್ನು ನಿರ್ಮಿಸಿದ್ದರು. ಈ ದೇವಾಲಯವು ಭಾರತ-ಪಾಕ್ ವಿಭಜನೆಯ ಸಮಯದಲ್ಲಿ ಮುಚ್ಚಲಾಗಿತ್ತು.
Advertisement
Advertisement
1992ರಲ್ಲಿ ಭಾರತದಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ನಂತರ ಪಾಕ್‍ನಲ್ಲಿದ್ದ ಹಿಂದೂಗಳು ಶಾವಾಲಾ ತೇಜ ಸಿಂಗ್ ದೇಗುಲಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಿದ್ದರು. ಅಂದಿನಿಂದ ದೇಗುಲದಲ್ಲಿ ಪೂಜೆ, ಪುನಸ್ಕಾರಗಳು ನಡೆಯದೆ ಪಾಳುಬಿದ್ದಿತ್ತು.
Advertisement
ಸುದ್ದಿಸಂಸ್ಥೆಯೊಂದರ ವರದಿ ಪ್ರಕಾರ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ದೇಶನದ ಮೇರೆಗೆ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗಿದೆ ಎನ್ನಲಾಗಿದೆ. ಅಲ್ಲದೆ ಜನರು ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಮುಕ್ತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿಲಾಲ್ ಹೈದರ್ ಹೇಳಿದ್ದಾರೆ.
Advertisement
ಹಾಗೆಯೇ ದೇವಾಲಯದ ಸಂರಕ್ಷಣೆ ಮತ್ತು ಪುನಃಸ್ಥಾಪಿಸುವ ಕಾರ್ಯವನ್ನು ಕೂಡ ಶೀಘ್ರದಲ್ಲೇ ಆರಂಭಿಸಲಾಗುತ್ತಿದೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.