ಮೈಸೂರು: ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ. ದಲಿತರು, ನಾಯಕರು, ಹಿಂದುಳಿದ ಸಮಾಜದ ಯುವಕರು ಉಳಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ತಿ. ನರಸೀಪುರದಲ್ಲಿ ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ವೇಣುಗೋಪಾಲ ನಾಯಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೂಂಡಾಗಿರಿ ವಾತಾವರಣವಿದೆ. ಹಿಂದೂಗಳು ಜೀವನ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹನುಮ ಜಯಂತಿ ಮಾಡುವುದು ಕೆಲವು ಜನರಿಗೆ ಭಯ ಹುಟ್ಟಿಸಿದೆ. ಕೇಸರಿ ಶಾಲು, ತಿಲಕ ಹಾಕಿಕೊಂಡರೆ ಹುಷಾರ್ ಅಂತ ರಾಜ್ಯದ ಮಂತ್ರಿ ಪೊಲೀಸರಿಗೆ ಹೇಳುತ್ತಾರೆ. ಇದೇನೂ ಪಾಕಿಸ್ತಾನವಾ ಎಂದು ಖಾರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ ಕೇಸ್ – ಸತ್ಯ ಶೋಧನೆಗಿಳಿದಿದ್ದ ಬಿಜೆಪಿಗೆ ಶಾಕ್!
Advertisement
Advertisement
ಹಿಂದೂ ಸಮಾಜ ಉಳಿಸಲು ಶ್ರೀಮಂತರ ಮಕ್ಕಳು ಬರಲ್ಲ. ಹಿಂದೂ ಸಮಾಜ ಉಳಿಸುತ್ತಿರೋರು ಮೇಲ್ಜಾತಿ ಹುಡುಗರಲ್ಲ. ದಲಿತರು, ನಾಯಕರು, ಹಿಂದುಳಿದ ಸಮಾಜದ ಯುವಕರು ಉಳಿಸುತ್ತಿದ್ದಾರೆ. ಗಣಪತಿ ಕೂರಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ ಹಲವು ನಿರ್ಬಂಧ ಹೇರಲಾಗಿತ್ತು. ಆಗ ಸಿಎಂ ಬೊಮ್ಮಾಯಿಗೆ ಫೋನ್ ಮಾಡಿ ನೀವು ಕರ್ನಾಟಕದ ಸಿಎಂ ಹ್ಹಾ ಅಥವಾ ಲಾಹೋರ್ ಸಿಎಂ ಹ್ಹಾ ಅಂತ ಪ್ರಶ್ನಿಸಿದ್ದೆ ಎಂದು ತಿಳಿಸಿದರು.
Advertisement
Advertisement
ಹಿಂದೂ ಕಾರ್ಯಕರ್ತರು ಯಾವುದೇ ಸಂಧಾನಕ್ಕೂ ಒಬ್ಬರೇ ಹೋಗಬೇಡಿ. ಪೊಲೀಸರನ್ನು ಹೇಗೆ ಉಪಯೋಗಿಸಿ ಕೊಳ್ಳಬೇಕು ಎಂದು ಯುಪಿ ಸಿಎಂ ನೋಡಿ ಕಲಿಯಬೇಕು. ಹಿಂದೂ ಧರ್ಮದ ಮೇಲೆ ಬಹು ವರ್ಷದಿಂದ ಸಂಘರ್ಷ ನಡೆದಿದೆ. ಸಂವಿಧಾನವನ್ನೇ ಬದಲಾಯಿಸುತ್ತಾರೆ ಎಂದು ಸುಳ್ಳು ಹಬ್ಬಿಸುತ್ತಾರೆ. ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಇರುತ್ತದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ – 6 ಜನರ ಮೇಲೆ ಎಫ್‌ಐಆರ್, ಇಬ್ಬರು ಅರೆಸ್ಟ್
ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಶ್ರದ್ಧಾಂಜಲಿಗೆ ಅನುಮತಿ ಕೊಡಲು ನಿರಾಕರಿಸುವುದು ಕ್ರೂರ ಮನಃಸ್ಥಿತಿ. ಕೊಲೆ ಮಾಡಿದವರಿಗಿಂತ ಅನುಮತಿ ನಿರಾಕರಿಸಿದವರ ಕ್ರೌರ್ಯ ಹೆಚ್ಚಿದೆ. ಸ್ವಾಮೀಜಿಗಳು, ತರುಣರು ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿ ಬಂದಿದೆ. ಹಿಂದೂ ಸಮಾಜವನ್ನು ತಲೆ ಎತ್ತದಂತೆ ಮಾಡಲು ಇಂತಹ ಕೊಲೆಗಳನ್ನು ಮಾಡಲಾಗುತ್ತಿದೆ ಕಿಡಿಕಾರಿದರು.
ಹನುಮ ಜಯಂತಿಯನ್ನು ಮುಂದಿನ ವರ್ಷ ಅದ್ಧೂರಿಯಾಗಿ ಮಾಡಬೇಕು. ಈ ಸಾವುಗಳನ್ನು ನಾವು ಮರೆಯಬಾರದು. ಈ ಸಾವಿನ ಹಿಂದೆ ನಿಂತು ಬೆಂಬಲ ಕೊಡುವವರು ಹೆಚ್ಚಿದ್ದಾರೆ ಎಂದು ತಿಳಿಸಿದರು.
Web Stories