ರಾಯ್‍ಪುರ: ದ್ವೇಷ ಭಾಷಣ ಮಾಡಿದ ಪ್ರಕರಣದ ಹಿನ್ನೆಲೆ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಕಳೆದ ಮೂರು ತಿಂಗಳಿಂದ ಸೆರೆವಾಸ ಅನುಭವಿಸುತ್ತಿದ್ದರು. ಆದರೆ ಈಗ ಛತ್ತೀಸ್‍ಗಢ ಹೈಕೋರ್ಟ್ ಕಾಳಿಚರಣ್ ಅವರಿಗೆ ಜಾಮೀನು ನೀಡಿದೆ.
Advertisement
ರಾಜ್ಯ ರಾಜಧಾನಿ ರಾಯ್‍ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾತ್ಮ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಈ ಕುರಿತು ಭಾರೀ ಚರ್ಚೆಯಾಗುತ್ತಿತ್ತು. ಕಾಳಿಚರಣ್ ವಕೀಲರು ಜಾಮೀನಿಗಾಗಿ ಓಡಾಡುತ್ತಿದ್ದರೂ ಸಿಕ್ಕಿರಲಿಲ್ಲ. ಆದರೆ ಮೂರು ತಿಂಗಳ ನಂತರ ಛತ್ತೀಸ್‍ಗಢ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಇದನ್ನೂ ಓದಿ: ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪೊಲೀಸರ ಮಸ್ತ್ ಡ್ಯಾನ್ಸ್: ಪರ,ವಿರೋಧ ಚರ್ಚೆ
Advertisement
ಡಿಸೆಂಬರ್ 30 ರಂದು ಮಧ್ಯಪ್ರದೇಶದ ರಾಯ್‍ಪುರ ಕಾರ್ಯಕ್ರಮದಲ್ಲಿ ಕಾಳಿಚರಣ್ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಈ ವೇಳೆ ಕಾಳಿಚರಣ್ ಅವರು ಗಾಂಧಿ ದೇಶವನ್ನು ನಾಶಮಾಡುತ್ತಿದ್ದಾರೆ ಎಂದು ಆರೋಪಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
Advertisement
Advertisement
ಈ ವೀಡಿಯೋದಲ್ಲಿ ಅವರು, ನಾನು ನಾಥೂರಾಂ ಗೋಡ್ಸೆಗೆ ನಮನ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು. ವಿಚಾರಣೆಯಲ್ಲಿ ಕಾಳಿಚರಣ್ ಪರ ವಕೀಲ ಕಿಶೋರ್ ಭಾದುರಿ ಅವರು, ತಮ್ಮ ಕಕ್ಷಿದಾರರು ನಿರಪರಾಧಿಯಾಗಿದ್ದು, ರಾಜಕೀಯ ಪೈಪೋಟಿಯಿಂದಾಗಿ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೈಕೋರ್ಟ್‍ಗೆ ತಿಳಿಸಿದ್ದರು. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು