– ರಾಕೇಶ್‌ಭಟ್ ಬಗ್ಗೆ ಪೇಜಾವರ ಶ್ರೀ ಮೆಚ್ಚುಗೆ
ವಾಷಿಂಗ್ಟನ್: ಅಮೆರಿಕದ (USA) ಚಿಕಾಗೋದಲ್ಲಿ ನಡೀತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ (Democratic National Convention) 3ನೇ ದಿನ ಹಿಂದೂ ಸಂಪ್ರದಾಯಂತೆ ವೇದ ಮಂತ್ರಗಳೊಂದಿಗೆ ಆರಂಭವಾಗಿದ್ದು ವಿಶೇಷ.
Hindu prayer at DNC. Day 3 started with a priest reciting ‘Om Shanti’ #DNC2024CHICAGO #DNCConvention #DNC2024 #DNC #Breaking #BreakingNews #KamalaHarris pic.twitter.com/SHpH4cfsid
— Breaking Now (@Tnworld177253) August 21, 2024
ಅಮೆರಿಕದಲ್ಲಿ ಈ ರೀತಿ ನಡೀತಿರೋದು ಇದು ಮೊದಲ ಬಾರಿ. ದೇಶದ ಐಕ್ಯತೆಯನ್ನು ಪ್ರತಿಪಾದಿಸಿದ ಬೆಂಗಳೂರು ಮೂಲದ ಅರ್ಚಕ ರಾಕೇಶ್ ಭಟ್ (Bengaluru Priest Rakesh Bhatt), ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಾ ದೇವರ ಆಶೀರ್ವಚನ ಕೋರಿದ್ರು.
ನಾವೆಲ್ಲ ಒಂದೇ ಕುಟುಂಬ.. ಸತ್ಯವೇ ನಮ್ಮ ಬುನಾದಿ.. ಅದೇ ನಮ್ಮನ್ನು ಗೆಲ್ಲಿಸುತ್ತದೆ.. ಕತ್ತಲಿನಿಂದ ಬೆಳಕಿನೆಡೆಗೆ.. ಸಾವಿನಿಂದ ಅಮರತ್ವದವರೆಗೂ ನಮ್ಮನ್ನು ನಡೆಸಿ ಎಂದು ಆ ದೇವರನ್ನು ಕೋರುತ್ತಿರುವೆ. ಓಂ ಶಾಂತಿ.. ಶಾಂತಿ ಶಾಂತಿ ಎಂದು ರಾಕೇಶ್ ಭಟ್ ಪ್ರಾರ್ಥಿಸಿದ್ರು.
ಈ ಬಗ್ಗೆ ಅಮೆರಿಕದಲ್ಲಿರುವ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾದಲ್ಲಿ ಹಿಂದೂ ಸಮಾಜಕ್ಕೆ ಹೆಚ್ಚುತ್ತಿರುವ ಆದರಣೆ, ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ ಎಂದು ಹಿಂದೂ ಮುಖಂಡರು (Hindu Leader) ಹೇಳಿದ್ದಾರೆ. ಪೇಜಾವರ ಶ್ರೀಗಳು ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿನ ಪೇಜಾವರ ಮಠದಲ್ಲಿ ಶಿಕ್ಷಣ ಪಡೆದಿರುವ ರಾಕೇಶ್ ಭಟ್, 2013ರಿಂದ ಮೇರಿಲ್ಯಾಂಡ್‌ನ ಶಿವವಿಷ್ಣು ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸ್ತಿದ್ದಾರೆ.