ಚೆನ್ನೈ: ಪ್ರೇಮಿಗಳ ದಿನವನ್ನು (Valentine’s Day) ವಿರೋಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ನಾಯಿಗಳಿಗೆ (Dog) ಮದುವೆ (Marriage) ಮಾಡಿಸುವ ಮೂಲಕ ವಿನೂತನವಾಗಿ ತಮಿಳುನಾಡಿನಲ್ಲಿ (Tamil Nadu) ಪ್ರತಿಭಟನೆ ನಡೆಸಿದರು.
ತಮಿಳುನಾಡಿನ ಶಿವಗಂಗಾದಲ್ಲಿ ಈ ಪ್ರತಿಭಟನೆ ನಡೆದಿದೆ. ವಿವಿಧ ಹಿಂದೂ ಸಂಘಟನೆಗಳು ಪ್ರೇಮಿಗಳ ದಿನವನ್ನು ವಿರೋಧಿಸಿದ್ದು, ಇದು ದೇಶದ ಸಂಸ್ಕೃತಿಗೆ ವಿರುದ್ಧವಾದ ಆಚರಣೆಯಾಗಿದೆ ಎಂದು ಕಿಡಿಕಾರಿದರು.
Advertisement
Advertisement
ಹಿಂದೂ ಸಂಘಟನೆಯ ಕಾರ್ಯಕರ್ತರು 2 ನಾಯಿಗಳನ್ನು ಕರೆತಂದು ಅದಕ್ಕೆ ವಧು ವರರ ರೀತಿಯಲ್ಲಿ ಸಿಂಗರಿಸಿ ಹಾರವನ್ನು ಹಾಕಿದರು. ನಂತರ ನಾಯಿಗಳಿಗೆ ಮದುವೆ ಮಾಡಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಡೇಟಿಂಗ್ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟ
Advertisement
Advertisement
ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ನಾಯಿಗಳಿಗೆ ಮದುವೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಹೇಳಿದರು. ಇದನ್ನೂ ಓದಿ: ಪಕ್ಷದ ರೈತ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ – ಕಾರ್ಯಕರ್ತರಿಗೆ ಭರ್ಜರಿ ಬಾಡೂಟ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k