ಬೆಂಗಳೂರು: ರಾಜ್ಯದಲ್ಲಿ ಮಸೀದಿ ಹಾಗೂ ಹಿಂದೂ ದೇಗುಲಗಳ ನಡುವಿನ ಧರ್ಮ ದಂಗಲ್ ಹೆಚ್ಚಾಗಿದೆ. ಈ ಬೆನ್ನಲ್ಲೆ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಹಿಂದೂಗಳಿಗೂ ಇತರೆ ಕಾರ್ಯಕ್ರಮಗಳಿಗೆ ಮೈದಾನ ನೀಡಬೇಕು. ಮುಸ್ಲಿಂ ಸಮುದಾಯಕ್ಕೊಂದೇ ಈ ಜಾಗ ಸೀಮಿತವಾಗಿಲ್ಲ ಅಂತ ವಂದೇ ಮಾತರಂ ಸಂಘಟನೆಯ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ್ ಆ್ಯಂಡ್ ಟೀಂ, ಈದ್ಗಾ ಮೈದಾನದ ಕಟ್ಟೆಯ ಮೇಲೆ ಕೂತು ಆಗ್ರಹಿಸಿದ್ರು. ಸ್ಥಳೀಯರು ಕೂಡ ಜಮಾಯಿಸ್ತಿದ್ದಂತೆ ಎಚ್ಚೆತ್ತ ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆದುಕೊಂಡು ಹೋದ್ರು.
Advertisement
ಕಳೆದ ಮೂರು ದಿನಗಳ ಹಿಂದೆ, ಈ ವಿಚಾರವಾಗಿ ಸನಾತನ ಹಿಂದೂ ಪರಿಷತ್ತು ಕಿಡಿಕಾರಿತ್ತು. ನಮಗೂ ಚಾಮರಾಜಪೇಟೆಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ, ರಾಷ್ಟ್ರೀಯ ಹಬ್ಬದ ದಿವಸ ರಾಷ್ಟ್ರಧ್ವಜ ಹಾರಿಸಲು ಅವಕಾಶ ಕೊಡಿ ಅಂತಾ ಸಿಎಂಗೆ ಪತ್ರ ಬರೆದಿತ್ತು. ಚಾಮರಾಜಪೇಟೆಯ ಮೈದಾನ ಸಾರ್ವಜನಿಕರ ಆಸ್ತಿ. ಆದರೆ ಒಂದೇ ಸಮೂದಾಯಕ್ಕೆ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟು, ನಮಗ್ಯಾಕೆ ತಾರತಮ್ಯ ಮಾಡ್ತಾ ಇದ್ದೀರಿ ಅಂತ ಕಿಡಿಕಾರಿದ್ರು. ಇದ್ರಿಂದ ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಲು ಪೊಲೀಸರ ಭದ್ರತೆ ಹೆಚ್ಚಿಸಲಾಗಿತ್ತು. ಇದ್ರ ನಡ್ವೆಯೂ ಇಂದು ಕನ್ನಡ ಸಂಘಟನೆಯ ಮುಖಂಡರ ಪ್ರತಿಭಟನೆಯಿಂದ ಪೊಲೀಸರು ಗಲಿಬಿಲಿಗೊಂಡಿದ್ರು.
Advertisement
Advertisement
ಈದ್ಗಾ ಮೈದಾನ ವಿಚಾರವಾಗಿ ಹಿಂದೂ ಹಾಗೂ ಕನ್ನಡ ಸಂಘಟನೆಗಳ ಮಧ್ಯೆಪ್ರವೇಶಕ್ಕೆ, ಮುಸ್ಲಿಂ ಮುಖಂಡ ಮಹ್ಮದ್ ಖಾಲಿಫ್ ಫುಲ್ ಗರಂ ಆಗಿದ್ದಾರೆ. ಎಲೆಕ್ಷನ್ ಬರ್ತಿದೆ ಅಂತ ಹೀರೋ ಆಗೋಕೆ ಹೊರಟಿದ್ದಾರೆ. ಚುನಾವಣೆಗಾಗಿ ಮುಸ್ಲಿಂಮರ ಭಾವನೆಗಳ ಜೊತೆ ಆಟ ಆಡ್ತಿದ್ದಾರೆ. ಚಾಮರಾಜಪೇಟೆ ಹೊಡೀತಿವಿ, ಶ್ರೀರಂಗಪಟ್ಟಣ ಹೊಡೀತಿವಿ ಅಂತಿದ್ದಾರೆ. ಹೊಡೆದಾಕೋಕೆ ಹೋದ್ರೆ ಜೀವಂತವಾಗಿ ಬಿಟ್ಟು ಬಿಡ್ತಾರಾ ಅಂತ ಹಿಂದೂ ಸಂಘಟನೆಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸೂ.. ಮಕ್ಕಳಾ ಅಂತ ಕಾಂಗ್ರೆಸ್ ಪಕ್ಷದವರನ್ನ ನಿಂದಿಸಿದ ಬಿಜೆಪಿ ಸಂಸದ
Advertisement
ಸ್ವಾತಂತ್ರ್ಯ ಬಂದಾಗಿನಿಂದ ಈದ್ಘಾ ಮೈದಾನದಲ್ಲಿ ರಾಷ್ಟ್ರ ಭಾವುಟವನ್ನ ಹಾರಿಸಿಲ್ಲ. ಹಿಂದೂ ಕಾರ್ಯಕ್ರಮಗಳು ನಡೆದಿಲ್ಲ. ಮುಸ್ಲಿಂ ಸಮುದಾಯಕ್ಕೆ ರಂಜಾನ್, ಹಾಗೂ ಬಕ್ರಿದ್ ಆಚರಣೆಗೆ ಮಾತ್ರ ಈ ಮೈದಾನದಲ್ಲಿ ಅವಕಾಶವಿದ್ದು, ಈ ವಿಚಾರ ಸುಪ್ರಿಂಕೋಟ್ರ್ನಲ್ಲಿದೆ. ವಿವಾದಿತ ಈದ್ಘಾ ಮೈದಾನದಲ್ಲಿ ಕಳೆದ ವರ್ಷ ಸ್ವಾಂತಂತ್ರ್ಯೋತ್ಸವ ದಿನದಂದು ಇದೇ ಶಿವಕುಮಾರ್ ನಾಯ್ಕ್, ರಾಷ್ಟ್ರಧ್ವಜವನ್ನ ಹಾರಿಸಿದ್ರು.