ಬೆಂಗಳೂರು: ಆಜಾನ್ ವಿಚಾರದಲ್ಲಿ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಆದರೆ ಸರ್ಕಾರದಿಂದ ಯಾವುದೇ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ದೇವಾಲಯಗಳಲ್ಲಿ ಆರತಿ, ಹನುಮಾನ್ ಚಾಲೀಸಾ ಪಠಿಸಲು ನಿರ್ಧರಿಸಿವೆ.
Advertisement
ಈ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಮತ್ತು ಆಂದೋಲ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಪರ ಸಂಘಟನೆಗಳು ಆಜಾನ್ ಕೂಗುವುದನ್ನು ನಿಷೇಧಿಸಲು ಮೇ 1 ರವರೆಗೂ ಗಡುವು ನೀಡಿದ್ದವು. ಮೇ 1ರ ಒಳಗೆ ಮಸೀದಿಯ ಧ್ವನಿವರ್ಧಕ ತೆರವಿಗೆ ಶ್ರೀರಾಮಸೇನೆ ಗಡುವು ನೀಡಿತ್ತು. ಆದರೆ ಸರ್ಕಾರ ಮೇ 1 ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.
Advertisement
Advertisement
ಸಾರ್ವಜನಿಕ, ವಸತಿ ಸ್ಥಳಗಳಲ್ಲಿ ಆಜಾನ್ ಕೂಗಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಡೆಸಿಬಲ್ ಕಡಿಮೆ ಇಡಬೇಕು ಅಂತಾ ಸುಪ್ರೀಂ ಕೋರ್ಟ್ ಸ್ಪಷ್ಟವಾದ ಆದೇಶ ನೀಡಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರಕ್ಕೆ ನೀಡಿದ್ದ ಗಡುವು ಅಂತ್ಯವಾದ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಆಜಾನ್ ವಿರುದ್ಧ ಹೋರಾಟ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.
Advertisement
ರಾಜ್ಯಾದ್ಯಂತ ಮೇ 9 ನೇ ತಾರೀಖು ಮೈಕ್ ಪ್ರಾರ್ಥನೆ ತಡೆಯದಿದ್ದರೆ ಹಿಂದೂ ಸಂಘಟನೆಗಳಿಂದ ಸಂಘರ್ಷವಾಗಲಿದ್ದು, ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಣ ಪಠಿಸಲಾಗುವುದು. ಹಿಂದೂ ದೇವಾಲಯಗಳ ಬಳಿ ಶ್ರೀರಾಮನ ಭಜನೆ ಮಾಡಲು ಶ್ರೀರಾಮ ಸೇನೆ ನಿರ್ಧರಿಸಿದೆ.
ಮೇ 9 ರ ಬೆಳ್ಳಗ್ಗೆ 5 ಗಂಟೆಗೆ ದೇಗುಲ, ಮಠದಲ್ಲಿ ಭಜನೆ ನಡೆಸುವ ಪ್ಲ್ಯಾನ್ ಹಾಕಿಕೊಂಡಿದೆ. ಹಿಂದೂಪರ ಸಂಘಟನೆಗಳು ಅಂದು ರಾಜ್ಯದ ದೇವಾಲಯಗಳಲ್ಲಿ ಮೈಕ್ ಹಾಕಿ ಕೀರ್ತನೆ, ಭಜನೆ ಪಠಣೆ ಮಾಡಲಿವೆ.