Bengaluru CityDistrictsKarnatakaLatestLeading NewsMain Post

ಬೆಂಗಳೂರಿನಲ್ಲಿ ಇಮ್ರಾನ್ ಖಾನ್ ಪುಸ್ತಕ ಬಿಡುಗಡೆಗೆ ವಿರೋಧ – ಹಿಂದೂಸಂಘಟನೆ ದೂರು, ಕಾರ್ಯಕ್ರಮ ರದ್ದು

ಬೆಂಗಳೂರು: ಪ್ರಮಥ ಪ್ರಕಾಶನದ (Pramatha Publications) ವತಿಯಿಂದ ಲೇಖಕ ಎಸ್.ಬಿ. ಸುಧಾಕರ ಅವರು ಬರೆದಿರುವ ಪಾಕಿಸ್ತಾನದ (Pakistan) ಮಾಜಿ `ಇಮ್ರಾನ್ ಖಾನ್ ಜೀವಂತ ದಂತ ಕಥೆ’ ಪುಸ್ತಕ ಬಿಡುಗಡೆಗೆ ಹಿಂದೂ ಸಂಘಟನೆಗಳಿಂದ (Hindu Organization) ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕಾರ್ಯಕ್ರಮ ರದ್ದಾಗಿದೆ.

ಶತ್ರು ದೇಶ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran khan), ಪುಲ್ವಾಮ (Pulwama Attack) ಬಳಿ ದಾಳಿ ನಡೆಸಿ 40 ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಂತಹ ಶತ್ರು ದೇಶದ ಮಾಜಿ ಪ್ರಧಾನಿಯನ್ನ ವೈಭವೀಕರಣ ಮಾಡೋದು ಸಹಿಸಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ಕೊಟ್ಟಿರುವ ಅನುಮತಿ ರದ್ದು ಮಾಡಬೇಕೆಂದು ಹಿಂದೂ ಜನ ಜಾಗೃತಿ ಸಮಿತಿ ಆಕ್ರೋಶ ವ್ಯಕ್ತಪಡಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೂರಿನ ಬೆನ್ನಲ್ಲೇ ಪೊಲೀಸರು (Police) ಕಾರ್ಯಕ್ರಮಕ್ಕೆ ಅನುಮತಿ ನೀಡದ ಕಾರಣ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದಾಗಿದೆ.

ಏನಿದು ವಿವಾದ?
ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲೇಖಕ ಎಸ್.ಬಿ. ಸುಧಾಕರ ಅವರು ಬರೆದಿರುವ ಈ ಪುಸ್ತಕ ಲೋಕಾರ್ಪಣೆಗೆ ಜಸ್ಟೀಸ್ ಎಚ್.ಎಸ್.ನಾಗಮೋಹನ್ ದಾಸ್ (Nagamohan Das) ಅವರನ್ನ ಆಹ್ವಾನಿಸಲಾಗಿತ್ತು. ಮಾಜಿ ಸಚಿವರಾದ ಎಚ್.ಆರ್.ಲೀಲಾದೇವಿ ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರೆ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಪುಸ್ತಕ ಕುರಿತು ಮಾತನಾಡಬೇಕಿತ್ತು.

ಪುಸ್ತಕ ಬಿಡುಗಡೆಗೆ ವಿರೋಧ: ಪುಸ್ತಕ ಬಿಡುಗಡೆಗೆ ಭಜರಂಗದಳ ಹಾಗೂ ಶ್ರೀರಾಮ ಸೇನೆ ವಿರೋಧ ವ್ಯಕ್ತಪಡಿಸಿತ್ತು. ನಮ್ಮ ದೇಶದಲ್ಲಿ ಸಾಕಷ್ಟು ಪರಿಸರವಾದಿಗಳು, ಜೀವಂತ ದಂತಕತೆಗಳಿವೆ. ಅದರ ಬಗ್ಗೆ ಬರೆಯೋದು ಬಿಟ್ಟು ಪಾಕ್ ದಿವಾಳಿಯನ್ನಾಗಿ ಮಾಡಿದ ಇಮ್ರಾನ್ ಪುಸ್ತಕ ಬರೆಯೋದು ಎಷ್ಟರ ಮಟ್ಟಿಗೆ ಸರಿ? ಇಂತಹ ಗಂಜಿ ಗಿರಾಕಿಗಳಿಗೆ ತಕ್ಕ ಪಾಠ ಕಲಿಸ್ಬೇಕು ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ.

Live Tv

Leave a Reply

Your email address will not be published. Required fields are marked *

Back to top button