ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್ ಪುರ ಪಟ್ಟಣದಲ್ಲೊಬ್ಬ ಭಾವೈಕ್ಯತಾ ಗಣಪ, ಧರ್ಮಗಳ ಮೀರಿ ಧಾರ್ಮಿಕ ನಂಬಿಕೆಯನ್ನ ಹಂಚುತ್ತಿದ್ದಾನೆ. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರೂ ಸೇರಿ ಗಣಪತಿ ಕೂರಿಸಿ ಸಂಭ್ರಮಿಸಿದ್ದಾರೆ.
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಗಣೇಶ ಹಬ್ಬವೂ ಒಂದು. ಆ ದಿನಗಳಲ್ಲಿ ಬೀದಿ-ಬೀದಿಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ಗಣೇಶನನ್ನ ಕೂರಿಸಿ ಸಂಭ್ರಮಿಸುತ್ತಾರೆ. ಅಲ್ಲದೇ ಧರ್ಮ ಮೀರಿದ ದೇವರ ನಂಬಿಕೆಯಿಂದ ಕೆಲ ಮುಸ್ಲಿಮರು ಕೂಡ ಗಣಪತಿ ಆಚರಣೆಯಲ್ಲಿ ಕೈ ಜೋಡಿಸುತ್ತಾರೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿ (Chikkamagaluru) ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂಬ ಭೇದವಿಲ್ಲದೇ ಎಲ್ಲರೂ ಒಟ್ಟುಗೂಡಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಲಕ್ನೋದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ – 5 ಮಂದಿ ಸಾವು, 24 ಜನರಿಗೆ ಗಾಯ
Advertisement
Advertisement
ಇಲ್ಲಿನ ಗಣಪತಿ ಸಮಿತಿಯ ಅಧ್ಯಕ್ಷೆ ಮುಸ್ಲಿಂ ಮಹಿಳೆ ಜುಬೇದಾ ತಮ್ಮ ಮಾತುಗಳ ಮೂಲಕ ಹಿಂದೂ-ಮುಸ್ಲಿಮರ ನಡುವೆ ಭಾವೈಕ್ತತೆ ಸಾರಿದ್ದಾರೆ. ಆಗಾಗ್ಗೆ ಹಿಂದೂ-ಮುಸ್ಲಿಮರ ನಡುವೆ ಅನೇಕ ವಿಚಾರಕ್ಕೆ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ, ಎನ್.ಆರ್ ಪುರ ತಾಲೂಕಿನ ರಾಜೀವ್ ನಗರದಲ್ಲಿ ಪ್ರತಿಷ್ಠಾಪನೆಯಾಗಿರೋ ಗಣೇಶ ಧರ್ಮ ಮೀರಿದ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾನೆ ಎಂದು ಅವರು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಅತ್ಯಾಚಾರ ಕೇಸ್ – ವಿಡಿಯೋ ಮಾಡಿ ಹರಿಬಿಟ್ಟಿದ್ದ ಆಟೋ ಚಾಲಕ ಅರೆಸ್ಟ್
Advertisement
Advertisement
ಕಳೆದ 14 ವರ್ಷಗಳಿಂದ ಇದೇ ಗ್ರಾಮದ ಮುಸ್ಲಿಂ ಮಹಿಳೆ ಜುಬೇದಾ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಹಿಂದೂ ಬಾಂಧವರೊಂದಿರಿಸಿ ಭೇದಗೆ ಸೇರಿ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಿಂದೂ-ಕ್ರೈಸ್ತ-ಮುಸ್ಲಿಂ ಮಕ್ಕಳನ್ನು ಒಂದೆಡೆ ಸೇವಾಭಾವ ತಾರತಮ್ಯವಿಲ್ಲದೇ ಮಕ್ಕಳಿಗೂ ಭಾವೈಕ್ಯತೆ ಸಂದೇಶವನ್ನು ಸಾರುತ್ತಿದ್ದಾರೆ. ಸಿದ್ಧಾಂತ ಇರೋದು ಧರ್ಮಕಷ್ಟೆ. ದೇವರಿಗಲ್ಲ. ಎಲ್ಲಾ ದೇವರು ಒಂದೇ ಎಂದು ಮಕ್ಕಳಿಗೂ ತಿಳಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ