ಎಕ್ಸಾಂ ನಡೆಯುತ್ತಿದ್ದ ಸ್ಕೂಲ್‍ಗೆ ನುಗ್ಗಿದ ಹಿಂದೂ ಮುನ್ನಾನಿ ಸದಸ್ಯರು – ಶಾಲೆ ಮುಚ್ಚುವಂತೆ ಒತ್ತಾಯ

Advertisements

ಪುದುಚೇರಿ: ಪುದುಚೇರಿಯ (Puducherry) ಬಾಲಕಿಯರ ಶಾಲೆಗೆ ನುಗ್ಗಿದ ಹಿಂದೂ ಮುನ್ನಾನಿ ಸದಸ್ಯರು ವಿದ್ಯಾರ್ಥಿನಿಯರು ತಮ್ಮ ತ್ರೈ ಮಾಸಿಕ ಪರೀಕ್ಷೆಯನ್ನು ಬರೆಯುತ್ತಿದ್ದರೂ ಶಾಲೆಯನ್ನು ಮುಚ್ಚುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಹಿಂದೂ ಮುನ್ನಾನಿ ಸದಸ್ಯರನ್ನು ಚದುರಿಸಿದ್ದಾರೆ.

Advertisements

ಹಿಂದೂ ಮುನ್ನಾನಿ (Hindu Munnani) ನೇತೃತ್ವದಲ್ಲಿ ಐದು ಹಿಂದೂಪರ ಸಂಘಟನೆಗಳು ಸೇರಿಕೊಂಡು ಮಂಗಳವಾರ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ (Union Territory of Puducherry) ಬಂದ್‍ಗೆ ಕರೆ ನೀಡಿದ್ದವು. ಇದರಿಂದಾಗಿ ಅಂಗಡಿಗಳನ್ನು ಮುಚ್ಚಲಾಯಿತು ಮತ್ತು ಹಲವಾರು ಖಾಸಗಿ ಶಾಲೆಗಳಿಗೆ ಸೆಪ್ಟೆಂಬರ್ 27 ರಂದು ರಜೆ ಘೋಷಿಸಲಾಗಿದೆ. ಆದರೆ ತ್ರೈಮಾಸಿಕ ಪರೀಕ್ಷೆ ನಡೆಯುತ್ತಿರುವುದರಿಂದ 600 ಬಾಲಕಿಯರು ಓದುತ್ತಿರುವ ಉಪ್ಪಳಂನಲ್ಲಿರುವ (Uppallam) ಇಮ್ಯಾಕ್ಯುಲೇಟ್ ಗರ್ಲ್ಸ್‌  ಹೈಯರ್ ಸೆಕೆಂಡರಿ ಶಾಲೆಗೆ (Girls Higher Secondary School) ರಜೆ ಘೋಷಿಸಲಾಗಿರಲಿಲ್ಲ.

Advertisements

ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿರುವುದನ್ನು ಕಂಡ ಹಿಂದೂ ಮುನ್ನಾನಿ ಕಾರ್ಯಕರ್ತರು ಶಾಲೆಯನ್ನು ಮುಚ್ಚುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. ಈ ವಿಚಾರ ತಿಳಿದ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದನ್ನೂ ಓದಿ: ಪ್ರತಿಷ್ಠಾಪನೆಯಾಗಿದ್ದ ದುರ್ಗಾ ದೇವಿಯ ವಿಗ್ರಹ ವಿರೂಪ – ಇಬ್ಬರು ಮಹಿಳೆಯರು ಅರೆಸ್ಟ್

ತಂಥೈ ಪೆರಿಯಾರ್ ದ್ರಾವಿಡರ್ ಕಳಗಂನ (Thanthai Periyar Dravidar Kazhagam) ಕಾರ್ಯಕರ್ತರು ಕೂಡ ಶಾಲೆಗೆ ಜಮಾಯಿಸಿ ತೀವ್ರ ವಾಗ್ವಾದ ನಡೆಸಿದರು. ಕೊನೆಯದಾಗಿ ಪುದುಚೇರಿ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದರು ಮತ್ತು ಹಿಂದೂ ಮುನ್ನಾನಿ ಕಾರ್ಯಕರ್ತರನ್ನು ಚದುರಿಸಿದರು. ನಂತರ ಪರೀಕ್ಷೆಗಳನ್ನು ನಿಗದಿತ ಸಮಯದಲ್ಲಿಯೇ ನಡೆಸಲಾಯಿತು. ಇದನ್ನೂ ಓದಿ: ದಸರಾ ಕವಿಗೋಷ್ಠಿಯಲ್ಲಿ ಮೃತಪಟ್ಟ ಕವಿಯ ಹೆಸರು – ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು

Advertisements

Live Tv

Advertisements
Exit mobile version