– ತಿಲಕ ಇಟ್ಕೊಂಡು ಮದುವೆಗೆ ಹೋಗಿದ್ದಕ್ಕೆ ಆಕ್ಷೇಪ
ನೆಲಮಂಗಲ: ಮುಸ್ಲಿಂ ಮದುವೆ ಮನೆಯಲ್ಲಿ ತಿಲಕ ಇಟ್ಕೊಂಡು ಊಟಕ್ಕೆ ಕುಳಿತಿದ್ದ ಹಿಂದೂ ವ್ಯಕ್ತಿಯನ್ನು ಅರ್ಧದಲ್ಲೇ ಎಬ್ಬಿಸಿ ಅಪಮಾನ ಮಾಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಆಹ್ವಾನದ ಮೇರೆಗೆ ಮದುವೆಗೆ ಬಂದ ವ್ಯಕ್ತಿ ಹಿಂದೂ ಎಂಬ ಕಾರಣಕ್ಕೆ ಊಟಕ್ಕೆ ಕುಳಿತಿದ್ದವರನ್ನು ಮೇಲಕ್ಕೆ ಏಳಿಸಿ ಅಪಮಾನ ಮಾಡಲಾಗಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಇದನ್ನೂ ಓದಿ: ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಯುಟಿ ಖಾದರ್ ಆರೋಪ ಮುಕ್ತರಾಗಲಿ – ವಿಶ್ವೇಶ್ವರ ಹೆಗಡೆ ಕಾಗೇರಿ
ನೆಲಮಂಗಲದ ಸಮಿವುಲ್ಲಾ ಕುಟುಂಬದ ಮದುವೆ ಇದೆ ತಿಂಗಳ 26 ರಂದು ಖಾಸಗಿ ಮಂಟಪದಲ್ಲಿ ಮುಜಾಮಿಲ್ ಪಾಷ ಹಾಗೂ ಸಾನಿಯಾ ಎಂಬವರ ಮದುವೆ ನಡೆದಿದೆ. ಈ ವೇಳೆ ಸಾನಿಯಾ ಕುಟುಂಬದ ಸ್ನೇಹಿತನಾದ ರಾಜು ಎಂಬವರು ಮದುವೆಗೆ ಹೋಗಿದ್ದರು. ಊಟಕ್ಕೆ ಕುಳಿತಿದ್ದ ವೇಳೆ ಸಮಿವುಲ್ಲಾ ಏಕಾಏಕಿ ಬಂದು, ‘ಆಹ್ವಾನ ನೀಡದೆ ಮದುವೆಗೆ ಏಕೆ ಬಂದೆ, ನಿನಗೆ ಊಟ ಹಾಕಲ್ಲ. ಮೇಲೆ ಏಳು ಎಂದು ಗಲಾಟೆ ಮಾಡಿದ್ದಾರೆ.
ಈ ಗಲಾಟೆಯನ್ನು ಮದುವೆಗೆ ಹೋಗಿದ್ದ ಮತ್ತೊಬ್ಬ ವ್ಯಕ್ತಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಬೀದರ್ | ಗ್ರಾ.ಪಂ ಅಧ್ಯಕ್ಷರ ಅಧಿಕಾರ ಚಲಾವಣೆ ಆರೋಪ – ಪಿಡಿಒ ಅಮಾನತು
 


 
		 
		 
		 
		 
		
 
		 
		 
		 
		