ಚಿತ್ರದುರ್ಗ: ಕೋಟೆನಾಡಿನಲ್ಲೂ ಗಣಪನ ಸಂಭ್ರಮ ಮನೆಮಾಡಿದ್ದು, ನಗರದ ಪ್ರಸಿದ್ಧ ಹಿಂದೂ ಮಹಾಗಣಪತಿಯ ಬೃಹತ್ ಮೂರ್ತಿಯನ್ನು ಅದ್ಧೂರಿಯಾಗಿ ಕ್ರೀಡಾಂಗಣ ರಸ್ತೆಯ ಖಾಸಗಿ ಶಾಲಾ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ರಾಜ್ಯದ ಪ್ರಮುಖ ಗಣಪತಿಗಳ ಪೈಕಿ ಅತ್ಯಂತ ಹೆಸರುವಾಸಿಯಾಗಿರುವ ನಗರದ ಹಿಂದೂ ಮಹಾಗಣಪತಿಯು ಮೂರ್ತಿಯನ್ನು ಸಕಲ ಸಂಪ್ರದಾಯಗಳೊಂದಿಗೆ ನೆರವೇರಿಸಲಾಯಿತು. ಪ್ರತಿಷ್ಠಾಪನೆಗೆ ಮಾದಾರ ಗುರುಪೀಠದ ಪೀಠಾಧ್ಯಕ್ಷರಾದ ಮಾದಾರ ಚನ್ನಯ್ಯ ಸ್ವಾಮೀಜಿಗಳು ಸಾನಿಧ್ಯವಹಿಸಿದ್ದರು. ಪ್ರತಿಷ್ಠಾಪನೆಯ ಬಳಿಕ ಸಾವಿರಾರು ಭಕ್ತರು ಬೆಳಗ್ಗಿನಿಂದಲೇ ಸರದಿ ಸಾಲಿನಿಲ್ಲಿ ನಿಂತು ಬೃಹತ್ ಗಣಪನ ದರ್ಶನ ಪಡೆದುಕೊಂಡರು.
ಒಟ್ಟು 15 ದಿನಗಳ ಕಾಲ ಭಕ್ತರು ಪೂಜೆ ಸಲ್ಲಿಸಿದ್ದು, ಬಳಿಕ ಗಣಪನನ್ನು ಬೃಹತ್ ಶೋಭಾಯಾತ್ರೆಯ ಮೂಲಕ ಚಂದ್ರವಳ್ಳಿಯ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈ ಶೋಭಾಯಾತ್ರೆಯಲ್ಲಿ ದೇಶದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಪೊಲೀಸ್ ಇಲಾಖೆಯು ಸಹ ಈ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಹೆಚ್ಚಿನ ಭದ್ರತೆಯನ್ನು ನೀಡಿ, ಯಾವುದೇ ಅವಘಡಗಳು ನಡೆಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv