ಬೀದರ್: ಆರ್‌ಎಸ್‌ಎಸ್ (RSS) ಟೀಕಿಸುವ ಭರದಲ್ಲಿ ಹಿಂದೂ ಎನ್ನುವುದು ಧರ್ಮವೇ ಅಲ್ಲ. ಅದು ಪರ್ಷಿಯನ್ ಪದ ಎಂದು ಹಿಂದೂ ಧರ್ಮದ ಬಗ್ಗೆ ಮುಂಬೈ ನಿವೃತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ (B.G. Kolse Patil) ಅವರು ವಿವಾದ ಹುಟ್ಟುಹಾಕಿದ್ದಾರೆ.
ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಯೋಜಿಸಿದ ಸೂಫಿ ಸಂತರ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಅಂದರೆ ಅರ್ಥ ಅದೊಂದು ಬೈಗುಳ. ಹಿಂದೂ ಧರ್ಮವೇ ಇಲ್ಲ. ಬ್ರಾಹ್ಮಣರು ಅವರ ಬುದ್ಧಿಯಿಂದ ನಮ್ಮನ್ನು ಗುಲಾಮರನ್ನಾಗಿಸಿ, ಹಿಂದೂ ಧರ್ಮವನ್ನು ಸೃಷ್ಟಿಸಿದರು. ಆದರೆ ಹಿಂದೂ ಧರ್ಮವೇ ಅಲ್ಲ, ಈ ಇತಿಹಾಸವನ್ನು ಹೇಳುವ ಕಾರ್ಯವನ್ನು ಈಗಿನ ಸಂತರು, ಮೌಲ್ವಿಗಳು ಮಾಡ್ಬೇಕು ಎಂದಿದ್ದಾರೆ.ಇದನ್ನೂ ಓದಿ: ಕುಕ್ಯಾತ ನಕ್ಸಲ್ ನಾಯಕ ರಾಮಧೇರ್ ಮಜ್ಜಿ ಸೇರಿ 11 ಮಂದಿ ಶರಣು – ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ನಕ್ಸಲ್ ಮುಕ್ತ?
ದೇಶದಲ್ಲಿನ ಎಲ್ಲಾ ದಂಗೆಗಳಿಗೆ ಆರ್‌ಎಸ್‌ಎಸ್ ಕಾರಣ, ಸಿಖ್‌ರ ದಂಗೆಗೂ ಆರ್‌ಎಸ್‌ಎಸ್‌ನವರೇ ಕಾರಣ ಹಾಗೂ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ಆರ್‌ಎಸ್‌ಎಸ್. ಅವರ ವಿರುದ್ಧ ಮಾತನಾಡಲು ಅನೇಕರು ಭಯಪಡುತ್ತಾರೆ. ಆರ್‌ಎಸ್‌ಎಸ್ ಹಾಗೂ ಬ್ರಾಹ್ಮಣರ ವಿರುದ್ಧ ಮಾತನಾಡಲು ಭಯಪಡಬೇಡಿ. ಅವರು ದೇಶದಲ್ಲಿ ಕೇವಲ ಒಂದು ಪರ್ಸೆಂಟ್ ಮಾತ್ರ ಇದ್ದಾರೆ. ಬ್ರಾಹ್ಮಣರು ಹೆದರು ಪುಕ್ಕಲರು ಎಂದು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ.

